ಹೈದರಾಬಾದ್: ಕೆಲ ಸೆಲಿಬ್ರಿಟಿಗಳ ಕುಟುಂಬದಲ್ಲಿ ಪ್ರೇಮ ಪ್ರಕರಣಗಳು, ವಿವಾಹ ವಿಚ್ಛೇದನ ಹೊಸದೇನಲ್ಲ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಇದಕ್ಕೆ ಹೊರತಾಗಿಲ್ಲ.

ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಅವರು ಸದ್ಯ ಇದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಕೆಲ ವಾಹಿನಿ ಹಾಗೂ ವೆಬ್‌ಸೈಟ್ ವರದಿಗಳ ಪ್ರಕಾರ ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿವೆ.

ಶ್ರೀಜಾ 2007 ರಲ್ಲಿ ಶಿರಿಶ್ ಭಾರದ್ವಾಜ್ ಅವರೊಂದಿಗೆ ಮದುವೆಯಾಗಿದ್ದರು. ಬಳಿಕ 2011 ರಲ್ಲಿ ಶಿರಿಶ್ ಅವರಿಗೆ ವಿಚ್ಛೇದನ ನೀಡಿದ್ದರು. ಇವರ ವಿಹಾಹ ಸಂಬಂಧದಲ್ಲಿ ಸಾಕಷ್ಟು ಬಿರುಕು ಮೂಡಿತ್ತು. ಇದು ಮೆಗಾಸ್ಟಾರ್ ಕುಟುಂಬದಲ್ಲಿ ಬಿರುಗಾಳಿ ಸೃಷ್ಟಿಸಿತ್ತು.

ನಂತರ 2016ರಲ್ಲಿ ಶ್ರೀಜಾ ಅವರು ಉದ್ಯಮಿ ಕಲ್ಯಾಣ್ ದೇವ್ ಅವರನ್ನು ಮದುವೆಯಾಗಿದ್ದರು. ಸದ್ಯ ಬಂದಿರುವ ವರದಿಗಳ ಪ್ರಕಾರ ಕಲ್ಯಾಣ್ ದೇವ್ ಜೊತೆ ಸಂಬಂಧವನ್ನು ಕಳೆದುಕೊಳ್ಳಲು ಶ್ರೀಜಾ ಮುಂದಾಗಿದ್ದಾರೆ. ಎಲ್ಲವೂ ಅಂತಿಮಗೊಂಡಿದ್ದು, ಕಾನೂನು ಪ್ರಕಾರ ವಿಚ್ಛೇದನ ಬಾಕಿ ಇದೆ ಎಂದು ತಿಳಿದು ಬಂದಿದೆ.

ಈ ಸುದ್ದಿಗೆ ಮುಖ್ಯ ಕಾರಣ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಪೋಸ್ಟ್‌ಗಳು. ಶ್ರೀಜಾ ಅವರು, ‘2022 ನನಗೆ ಒಬ್ಬ ಅದ್ಭುತ ವ್ಯಕ್ತಿಯನ್ನು ಪರಿಚಯ ಮಾಡಿಕೊಟ್ಟಿದೆ. ಕಾಳಜಿ ತೋರಿಸುವ, ನನ್ನನ್ನು ಅತಿಯಾಗಿ ಪ್ರೀತಿಸುವ, ನನ್ನೊಂದಿಗೆ ನಿಲ್ಲುವ ವ್ಯಕ್ತಿಯನ್ನು ಪರಿಚಯಿಸಿದೆ. ಹೊಸ ಪಯಣ ಪ್ರಾರಂಭವಾಗಲಿದೆ’ ಎಂದು ಬರೆದುಕೊಂಡಿದ್ದರು. ಬಳಿಕ ಆ ಪೋಸ್ಟ್ ಡಿಲೀಟ್ ಆಗಿತ್ತು. ಅತ್ತ ಕಲ್ಯಾಣ್ ದೇವ್ ಕೂಡ ಇದೇ ರೀತಿ ಪೋಸ್ಟ್ ಹಾಕಿಕೊಂಡಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲೂ ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

34 ವರ್ಷದ ಶ್ರೀಜಾ ಕೋನಿಡೇಲಾ ಅವರಿಗೆ ಮೊದಲ ಗಂಡನಿಂದ ಒಂದು ಮಗು ಹಾಗೂ ಎರಡನೇ ಗಂಡನಿಂದ ಒಂದು ಮಗು ಇದೆ. ಇತ್ತೀಚೆಗೆ ಹೈದರಾಬಾದ್‌ನ ಪ್ರತಿಷ್ಟಿತ ಏರಿಯಾದಲ್ಲಿ ಚಿರಂಜೀವಿ ಅವರು ಶ್ರೀಜಾಗೆ ₹35 ಕೋಟಿ ಪ್ಲಾಟ್ ನೀಡಿದ್ದಾರೆ ಎಂಬುದು ವರದಿಯಾಗಿತ್ತು.

ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ನಟ ಕಿಶೋರ್ ಪೋಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.