ಬೆಂಗಳೂರು: ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರ ಡಿಸೆಂಬರ್12 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

ಈ ಕುರಿತು ದರ್ಶನ್ ಅವರ ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಿಸುತ್ತಿರುವ ವಿಜಯಲಕ್ಷ್ಮಿ ಅವರು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಳಿಸಿದ್ದಾರೆ.

‘ನಿಮ್ಮ ಪ್ರೀತಿಯ ‘ಚಾಲೆಂಜಿಂಗ್ ಸ್ಟಾರ್ ದರ್ಶನ್’ ಅಭಿನಯದ ‘ದಿ ಡೆವಿಲ್’ ಚಿತ್ರ 12 - 12 - 2025 ರಂದು ರಾಜ್ಯದಾದ್ಯಂತ ಬೆಳ್ಳಿ ತೆರೆಗೆ’ ಎಂದು ಬರೆದುಕೊಂಡಿದ್ದಾರೆ,

ಡೆವಿಲ್ ಚಿತ್ರದ ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಭಾನುವಾರ ಬಿಡುಗಡೆಯಾಗಿದೆ. ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ ಸಂಗೀತವಿದೆ.

ಶ್ರೀ ಜೈಮಾತ ಕಂಬೈನ್ಸ್ ಲಾಂಛನದಲ್ಲಿ ಜೆ.ಜಯಮ್ಮ ನಿರ್ಮಾಣ ಮಾಡಿರುವ ಈ ಚಿತ್ರದ ಹಾಡುಗಳ ಚಿತ್ರೀಕರಣ ಬ್ಯಾಂಕಾಕ್ನಲ್ಲಿ ನಡೆದಿದೆ.

ಚಿತ್ರದಲ್ಲಿ ನಾಯಕಿಯಾಗಿ ರಚನ ರೈ ನಟಿಸಿದ್ದು, ತುಳಸಿ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭರಾಜ್ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಸದ್ಯ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರರಾಗಿದ್ದಾರೆ.

ಈ ಹಿಂದೆ ‘ಸಾರಥಿ’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಪ್ರಕರಣವೊಂದರಲ್ಲಿ ದರ್ಶನ್ ಜೈಲಿನಲ್ಲೇ ಇದ್ದರು. ಸಾರಥಿ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈಗ ಡೆವಿಲ್ ಚಿತ್ರ ಕೂಡ ಇಂಥಹದ್ದೇ ಸ್ಥಿತಿಯನ್ನು ಎದುರಿಸುತ್ತಿದೆ.
.ದರ್ಶನ್ ನಟನೆಯ ಡೆವಿಲ್ ಸಿನಿಮಾದ ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.'ದಿ ಡೆವಿಲ್' ಟೀಸರ್: ನಟ ದರ್ಶನ್ ಅಭಿಮಾನಿಗಳಲ್ಲಿ ನೂರ್ಮಡಿಸಿದ ಸಂಭ್ರಮ.ಜೈಲಿನಲ್ಲಿ ದರ್ಶನ್: ಜಾಲತಾಣದಲ್ಲಿ ಹರಿದಾಡಿದ ಫೋಟೊ.Renukaswamy Murder | ಜಾಮೀನು ಆದೇಶ ರದ್ದು: ದರ್ಶನ್, ಪವಿತ್ರಾ ಮತ್ತೆ ಜೈಲಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.