ಅಜಯ್ ದೇವಗನ್ ಮತ್ತು ರಕುಲ್ ಪ್ರೀತ್ ಸಿಂಗ್ ನಟನೆಯ ‘ದೇ ದೇ ಪ್ಯಾರ್ ದೇ–2’ ಚಿತ್ರ ಬಿಡುಗಡೆಯಾದ ಮೂರು ದಿನದಲ್ಲಿ ಬಾಕ್ಸ್ ಆಫೀಸ್ನಲ್ಲಿ ₹50 ಕೋಟಿ ಗಳಿಸಿರುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
.ನಟ ಅಜಯ್ ದೇವಗನ್ ಅಭಿನಯದ 'ದೇ ದೇ ಪ್ಯಾರ್ ದೇ 2' ನವೆಂಬರ್ 14ಕ್ಕೆ ತೆರೆಗೆ.
ನಟ ಆರ್. ಮಾಧವನ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. 2019ರಲ್ಲಿ ತೆರೆಕಂಡ ‘ದೇ ದೇ ಪ್ಯಾರ್ ದೇ’ ಚಿತ್ರದ ಮುಂದುವರಿದ ಭಾಗವಾಗಿದೆ. ‘ದೇ ದೇ ಪ್ಯಾರ್ ದೇ–2’ ಚಿತ್ರವನ್ನು ಅನ್ಶುಲ್ ಶರ್ಮಾ ನಿರ್ದೇಶಿಸಿದ್ದಾರೆ.

‘ದೇ ದೇ ಪ್ಯಾರ್ ದೇ‘ ಚಿತ್ರವು 50 ವರ್ಷದ ಶ್ರೀಮಂತ ವ್ಯಕ್ತಿ ಆಶಿಶ್ (ದೇವ್ಗನ್) ಸುತ್ತ ಹೆಣೆದಿರುವ ಕಥೆಯಾಗಿದೆ. ಆಶಿಶ್ ತನ್ನ ಅರ್ಧದಷ್ಟು ವಯಸ್ಸಿನ ಆಯೇಷಾ (ಸಿಂಗ್)ಳನ್ನು ಪ್ರೀತಿಸುತ್ತಾನೆ. ಆದರೆ, ಕುಟುಂಬ ಮತ್ತು ಅವರ ಮಾಜಿ ಪತ್ನಿ ಮಂಜು (ತಬು) ಅವರ ಸಂಬಂಧವನ್ನು ಒಪ್ಪದೇ ತಿರಸ್ಕರಿಸುತ್ತಾರೆ.

ಸಿನಿಮಾ ಮೂರು ದಿನದ ಗಳಿಕೆ ಕುರಿತು ರಕುಲ್ ಪ್ರೀತ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದು, ಪೋಸ್ಟರ್ ಮೇಲೆ ಬಾಕ್ಸ್ ಆಫೀಸ್ ಸಂಖ್ಯೆಗಳನ್ನು ಬರೆದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಒಟ್ಟು ₹58.60 ಕೋಟಿ ಗಳಿಸಿರುವುದಾಗಿ ಅವರು ತಿಳಿಸಿದ್ದಾರೆ.

ಈ ಚಿತ್ರವನ್ನು ಲವ್ ಫಿಲ್ಮ್ಸ್ ಹಾಗೂ ಭೂಷಣ್ ಕುಮಾರ್ ಅವರ ಟಿ-ಸಿರೀಸ್ ನಿರ್ಮಿಸಿವೆ. ರಂಜನ್ ಅಂಕುರ್ ಗರ್ಗ್ ಅವರು ಸಹ ನಿರ್ದೇಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.