ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ನಟನೆಯ, ಎ.ಪಿ. ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಟೀಸರ್ ಸದ್ಯ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಟೀಸರ್ 7 ಕೋಟಿ ವೀಕ್ಷಣೆ ಪಡೆದಿದೆ.
ಈ ಚಿತ್ರಕ್ಕೆ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಧ್ರುವ ಅವರಿಗಾಗಿಯೇ ಈ ಕಥೆಯನ್ನು ಹೆಣೆದಿರೋ ಅರ್ಜುನ್ ಸರ್ಜಾ, ‘ಧ್ರುವನಿಗೆ ಕಥೆ ಒಪ್ಪಿಸುವುದು ಅಷ್ಟು ಸುಲಭದ ಮಾತಲ್ಲ’ ಎಂದಿದ್ದಾರೆ. ಕಥೆ ಬಗ್ಗೆ ವಿವರಣೆ ನೀಡಿದ ಅವರು, ‘ಇವತ್ತು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಒಂದು ಚಳವಳಿಯ ರೂಪ ಪಡೆದಿದೆ. ಇದಕ್ಕೆ ಎಸ್.ಎಸ್.ರಾಜಮೌಳಿ, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಹೀಗೆ ಹಲವರು ಕಾರಣ. ‘ಮಾರ್ಟಿನ್’ ಎನ್ನುವುದು ಬೃಹತ್ ಪ್ರಾಜೆಕ್ಟ್. ಇದು ಧ್ರುವನ ಐದನೇ ಸಿನಿಮಾ. ಆತನಿಗೆ ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುವ ಆಸೆ. ಯಾವ ರೀತಿಯ ಕಥೆ ಮಾಡಬೇಕು ಎನ್ನುವುದನ್ನು ನಾವೆಲ್ಲರೂ ಕೂತು ಚರ್ಚೆ ಮಾಡಿದೆವು. ಧ್ರುವನಿಗೆ ಕಥೆ ಒಪ್ಪಿಸುವುದು ತುಂಬಾನೆ ಕಷ್ಟ. ಧ್ರುವನಿಗೆ ಒಂದು ಲೈನ್ ಇಷ್ಟವಾದ ಮೇಲೆ ಮುಂದುವರಿ ದೆವು. ನಾನು ಇದುವರೆಗೆ ಮಾಡಿದ ಕಥೆಗಳ ಪೈಕಿ, ‘ಮಾರ್ಟಿನ್’ ಅತ್ಯುತ್ತಮ ಕಮರ್ಷಿಯಲ್ ಕಥೆ. ಚಿತ್ರಕಥೆಯಲ್ಲಿ
ಹಲವು ತಿರುವುಗಳಿವೆ. ಚಿತ್ರಕ್ಕಾಗಿ ಧ್ರುವನಲ್ಲಿದ್ದ ಆಸ್ಥೆ ಮೆಚ್ಚುವಂತಹದ್ದು. ನಾನಿಷ್ಟು ಸಿನಿಮಾ ಮಾಡಿದರೂ, ಅವನ ಬಳಿ ಕಲಿಯುವುದು ಬಹಳಷ್ಟಿದೆ’ ಎನ್ನುತ್ತಾರೆ.
‘ಇಡೀ ಸಿನಿಮಾ ಭಾರತ–ಪಾಕಿಸ್ತಾನದ ನಡುವಿನ ಕಥೆಯಲ್ಲ. ಪಾಕಿಸ್ತಾನದಲ್ಲಿ ಕೆಲ ಘಟನೆಗಳು ನಡೆಯುತ್ತವೆ. ಇದಕ್ಕೆ ಇರುವ ಸಂಬಂಧವೇನು ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು. ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿರುವ ಹೀರೊಗಳು ನನ್ನ ಸಹೋದ್ಯೋಗಿಗಳು. ನಾನು ಸ್ನೇಹಿತರೊಂದಿಗೆ ಸ್ಪರ್ಧೆಗಿಳಿಯಲು ಬಯಸಲ್ಲ’ ಎನ್ನುತ್ತಾರೆ ಧ್ರುವ ಸರ್ಜಾ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.