ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪಘಾತ’ಕ್ಕೊಳಗಾದ ದಿಗಂತ್‌!

Last Updated 29 ಡಿಸೆಂಬರ್ 2022, 16:30 IST
ಅಕ್ಷರ ಗಾತ್ರ

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾತಂಡವು ‘ದೂದ್‌ಪೇಢ’ ದಿಗಂತ್‌ ಅವರ ಜನ್ಮದಿನದಂದು ಚಿತ್ರದ ಹೊಸ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆ ಮಾಡಿದೆ.

ದಿಗಂತ್ ಅವರು ಇಲ್ಲಿಯವರೆಗೂ ಚಾಕೊಲೇಟ್ ಬಾಯ್ ರೀತಿ ಇದ್ದರು. ರೊಮ್ಯಾಂಟಿಕ್ ಹೀರೊ ದಿಗಂತ್‌ ಈ ಸಿನಿಮಾದಲ್ಲಿ ಸಂಪೂರ್ಣವಾಗಿ ವಿಭಿನ್ನ ಪಾತ್ರದಲ್ಲಿ ಕಾಣಸಿಗಲಿದ್ದಾರೆ ಎಂದಿದೆ ಚಿತ್ರತಂಡ. ಎಡಗೈ ಬಳಸುವ ಜನರ ಕಥೆಹೊತ್ತ ಈ ಸಿನಿಮಾದಲ್ಲಿ ಎಡಗೈಯನ್ನೇ ಹೆಚ್ಚು ಬಳಸುವ ಜನರು ಅನುಭವಿಸುವ ಸಮಸ್ಯೆ, ಸಂಕಷ್ಟದ ಸರಮಾಲೆಯೇ ಇದೆ.

ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಜನವರಿ ಕೊನೆಯಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಸಮರ್ಥ್ ಬಿ. ಕಡಕೊಳ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT