ಮಂಗಳವಾರ, ಜೂಲೈ 7, 2020
28 °C

ಲಾಕ್‌ಡೌನ್‌ನಲ್ಲಿ ತರಕಾರಿ ಮಾರುತ್ತಿರುವ ಬಾಲಿವುಡ್‌ ನಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಆಮೀರ್ ಖಾನ್ ಮತ್ತು ರಾಣಿ ಮುಖರ್ಜಿ‌ ಜತೆ ‘ಗುಲಾಮ್’ ಚಿತ್ರದಲ್ಲಿ ಅಭಿನಯಸಿದ್ದ ಪೋಷಕ ನಟ ಜಾವೇದ್‌ ಹೈದರ್ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?

ಬಾಲಿವುಡ್ ಚಿತ್ರಗಳಲ್ಲಿ ನಾಯಕನ ಸ್ನೇಹಿತನಂತಹ ಚಿಕ್ಕಪುಟ್ಟ ಪೋಷಕ ಪಾತ್ರಗಳಲ್ಲಿ ನಟಿಸಿರುವ ಮತ್ತು ಟಿ.ವಿ ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿದ್ದ ಜಾವೇದ್‌ ಹೈದರ್‌ ಲಾಕ್‌ಡೌನ್‌ನಿಂದಾಗಿ ಕೈಯಲ್ಲಿ ಕೆಲಸ ಇಲ್ಲದೆ ಮುಂಬೈ ಗಲ್ಲಿಗಳನ್ನು ಸುತ್ತಿ ತರಕಾರಿ ಮಾರುತ್ತಿದ್ದಾರೆ. 

ತಳ್ಳು ಗಾಡಿಯಲ್ಲಿ ಹೈದರ್ ಸಿನಿಮಾ ಹಾಡು ಗುನುಗುತ್ತ‌ ತರಕಾರಿ ಮಾರುತ್ತಿರುವ ಟಿಕ್‌ಟಾಕ್‌ ವಿಡಿಯೊ ಕ್ಲಿಪ್ ಅನ್ನು ಡಾಲಿ ಬಿಂದ್ರಾ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಈ‌ ಬಾಲಿವುಡ್‌ ನಟ ಸಬ್ಜಿ (ತರಕಾರಿ) ಈಗ ಮಾರಾಟ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಗುಲಾಮ್‌‘, ‘ಬಾಬರ್‘, ‘ಲೈಫ್‌ ಕಿ ಐಸಿ ಕಿ ತೈಸಿ’ ಮುಂತಾದ ಬಾಲಿವುಡ್‌ ಸಿನಿಮಾ ಮತ್ತು ‘ಜೆನ್ನಿ ಔರ್‌ ಜೂಜು’ ಹಿಂದಿ ಟಿ.ವಿ. ಧಾರಾವಾಹಿಗಳಲ್ಲಿ ಜಾವೇದ್‌ ನಟಿಸಿದ್ದಾರೆ. 

‘ದುನಿಯಾ ಮೆ ರೆಹನಾ ಹೈ ತೋ ಕಾಮ್ ಕರ್ ಹೈ ಪ್ಯಾರೇ...ಹಾತ್ ಜೋಡಕರ್ ಸಬ್‌ ಕೊ ಸಲಾಂ ಕರ್‌ ಪ್ಯಾರೇ...’ ಎಂಬ ಹಾಡಿಗೆ ಬಾಲಿವುಡ್‌ ಸ್ಟೈಲ್‌ನಲ್ಲಿ ಕುಣಿಯುತ್ತಾ ಗ್ರಾಹಕರಿಗೆ ಟೊಮಾಟೊ ಚೀಲ ಕೊಡುವ ಟಿಕ್‌ಟಾಕ್‌ ವಿಡಿಯೊ ಕ್ಲಿಪ್‌ ಅನ್ನು ಹೈದರ್ ಕೂಡ‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

‘ಬದುಕು ಕಟ್ಟಿಕೊಳ್ಳಲು ಯಾವ ಕೆಲಸವಾದರೇನು? ಯಾವ ಕೆಲಸ ದೊಡ್ಡದು ಅಲ್ಲ, ಸಣ್ಣದೂ ಅಲ್ಲ’ ಎಂಬ ಸಂದೇಶ ಸಾರಿದ ನಟನ ಸ್ವಾಭಿಮಾನ ಮತ್ತು ಛಲಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಹೈದರ್‌ ಟಿಕ್‌ಟಾಕ್‌ನಲ್ಲಿ‌ 97.7 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟ್ಟರ್‌ನಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೊ ವೀಕ್ಷಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು