ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆದಿಪುರುಷ ಸಿನಿಮಾ ಬಿಡುಗಡೆಗೆ ಸಜ್ಜು: ತಿರುಪತಿಯಲ್ಲಿ ದೇವರ ದರ್ಶನ ಪಡೆದ ನಟ ಪ್ರಭಾಸ್‌

Published 6 ಜೂನ್ 2023, 10:01 IST
Last Updated 6 ಜೂನ್ 2023, 10:01 IST
ಅಕ್ಷರ ಗಾತ್ರ

ಹೈದರಾಬಾದ್: ನಟ ಪ್ರಭಾಸ್‌ ಮುಂಬರುವ ಚಿತ್ರ ‘ಆದಿಪುರುಷ‘ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

‘ಆದಿಪುರುಷ‘ ಚಿತ್ರದ ಟ್ರೇಲರ್‌ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದು, ತಿರುಪತಿ ಜಿಲ್ಲೆಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು(ಮಂಗಳವಾರ) ಪ್ರಾರ್ಥನೆ ಸಲ್ಲಿಸಿದರು.

ತಿರುಪತಿಯಲ್ಲಿ ದರ್ಶನ ಪಡೆದ ಚಿತ್ರಗಳನ್ನು ಟ್ವೀಟ್ ಮಾಡಿರುವ ನಟ ಪ್ರಭಾಸ್‌, ಆದಿಪುರುಷ ಸಿನಿಮಾವು ಇದೇ ಜೂನ್ 16ರಂದು ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಓಂ ರಾವತ್‌ ನಿರ್ದೇಶಿಸಿರುವ ‘ಆದಿಪುರುಷ‘ ಸಿನಿಮಾವು ಬಿಗ್‌ ಬಜೆಟ್‌ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಪ್ರೇಕ್ಷಕರ ಎದುರು ಬರಲಿದೆ. ಈ ಚಿತ್ರದಲ್ಲಿ ನಟಿ ಕೃತಿ ಸನೋನ್, ಸನ್ನಿ ಸಿಂಗ್‌ , ದೇವ ದತ್ತ ನಾಗೆ ಹಾಗೂ ಸೈಫ್ ಅಲಿ ಖಾನ್‌ ಸಹ ನಟಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ‘ಆದಿಪುರುಷ‘ ಚಿತ್ರವು 3ಡಿಯಲ್ಲಿ ಕಾಣಿಸಲಿದ್ದು, ಮೊದಲ ಪ್ರದರ್ಶನವು ಜೂನ್ 13ರಂದು ನ್ಯೂಯಾರ್ಕ್‌ನ ಟ್ರಿಬೆಕಾ ಚಲನಚಿತ್ರೋತ್ಸವ 2023ನಲ್ಲಿ ತೆರೆ ಮೇಲೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT