ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಅಂಜಲಿ ಜೊತೆ ಬಾಲಕೃಷ್ಣ ಅನುಚಿತ ವರ್ತನೆ? ಸಾಮಾಜಿಕ ಮಾಧ್ಯಮದಲ್ಲಿ ಟೀಕೆ

Published 30 ಮೇ 2024, 11:41 IST
Last Updated 30 ಮೇ 2024, 11:41 IST
ಅಕ್ಷರ ಗಾತ್ರ

ಹೈದರಾಬಾದ್: ಮಾಸ್‌ ಡೈಲಾಗ್‌ಗಳಿಂದಲೇ ಹೆಚ್ಚು ಖ್ಯಾತಿ ಗಳಿಸಿರುವ ತೆಲುಗು ನಟ ಬಾಲಕೃಷ್ಣ ಅವರು ನಟಿ ಅಂಜಲಿ ಅವರೊಂದಿಗೆ ವೇದಿಕೆಯೊಂದರಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಗ್ಯಾಂಗ್ಸ್ ಆಫ್ ಗೋದಾವರಿ‘ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ ಅವರು ವೇದಿಕೆಗೆ ಆಗಮಿಸಿದ್ದಾರೆ. ನಟಿ ನೇಹಾ ಶೆಟ್ಟಿ ಹಾಗೂ ನಟಿ ಅಂಜಲಿ ವೇದಿಕೆಯಲ್ಲಿ ನಿಂತಿದ್ದರು. ಈ ವೇಳೆ ಬಾಲಕೃಷ್ಣ ಅವರು ಅಂಜಲಿ ಅವರನ್ನು ಏಕಾಏಕಿ ತಳ್ಳಿದ್ದಾರೆ. ಇದರಿಂದ ಅಂಜಲಿ ಗಾಬರಿಗೊಂಡರು. ಬಳಿಕ ನಗುವಿನೊಂದಿಗೆ ಆ ಘಟನೆಯನ್ನು ಮರೆಮಾಚಿರುವ ದೃಶ್ಯಗಳು ವಿಡಿಯೊದಲ್ಲಿದೆ.

ಇದೀಗ ಬಾಲಕೃಷ್ಣರವರ ನಡವಳಿಕೆಯ ಕುರಿತು ಪರ–ವಿರೋಧ ಚರ್ಚೆಗಳು ನಡೆಯುತ್ತಿದೆ. ಬಾಲಕೃಷ್ಣ ಅಭಿಮಾನಿಗಳು ಈ ಘಟನೆಯನ್ನು ತಪ್ಪಾಗಿ ಅರ್ಥೈಸಿದ್ದೀರಿ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಸಿನಿಮಾ ಕ್ಷೇತ್ರದಲ್ಲಿ ಪ್ರಖ್ಯಾತಿ ಗಳಿಸಿರುವ ಬಾಲಕೃಷ್ಣ ವಿರುದ್ಧ ಮಾತನಾಡದೆ ಅಂಜಲಿ ಮೌನ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಸ್ತುತ ಬಾಲಕೃಷ್ಣ ಅವರು ಎನ್‌ಬಿಕೆ 109 ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದೇ ವರ್ಷ ಈ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT