ಶನಿವಾರ, ಜನವರಿ 16, 2021
17 °C

ಎಕೆ ವರ್ಸಸ್‌ ಎಕೆ ಚಿತ್ರಕ್ಕೆ ವಾಯುಪಡೆ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಅನಿಲ್‌ ಕಪೂರ್‌ ನಟನೆಯ ‘ಎಕೆ ವರ್ಸಸ್‌ ಎಕೆ’ ಚಿತ್ರದಲ್ಲಿ ಭಾರತೀಯ ವಾಯುಪಡೆಯ ಸಮವಸ್ತ್ರವನ್ನು ಸರಿಯಾದ ರೀತಿಯಲ್ಲಿ ಧರಿಸಿಲ್ಲ ಹಾಗೂ ಚಿತ್ರದಲ್ಲಿನ ಭಾಷೆಯ ಬಗ್ಗೆ ಭಾರತೀಯ ವಾಯುಪಡೆ (ಐಎಎಫ್‌) ಆಕ್ಷೇಪ ವ್ಯಕ್ತಪಡಿಸಿದೆ.

‘ಚಿತ್ರದಿಂದ ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳನ್ನು ಹಿಂಪಡೆಯಬೇಕು’ ಎಂದು ಟ್ವೀಟ್‌ ಮೂಲಕ ಐಎಎಫ್‌ ಆಗ್ರಹಿಸಿದೆ. ‘ವಿಡಿಯೊದಲ್ಲಿ ಐಎಎಫ್‌ ಸಮವಸ್ತ್ರವನ್ನು ಸರಿಯಾಗಿ ಧರಿಸಿಲ್ಲ ಹಾಗೂ ಅದರಲ್ಲಿರುವ ಭಾಷೆಯು, ಭಾರತೀಯ ಶಸ್ತ್ರಪಡೆಯಲ್ಲಿರುವವರ ನಡವಳಿಕೆಗೆ ವಿರುದ್ಧವಾಗಿದೆ. ಈ ದೃಶ್ಯಾವಳಿಗಳನ್ನು ಹಿಂಪಡೆಯಬೇಕು’ ಎಂದು ನೆಟ್‌ಫ್ಲಿಕ್ಸ್‌ಇಂಡಿಯಾ ಹಾಗೂ ಅನುರಾಗ್‌ಕಶ್ಯಪ್‌ ಅವರನ್ನು ಟ್ಯಾಗ್‌ ಮಾಡಿ ಐಎಎಫ್‌ ಟ್ವೀಟ್‌ ಮಾಡಿದೆ.

ಈ ಚಿತ್ರವನ್ನು ವಿಕ್ರಮಾದಿತ್ಯ ಮೋಟ್ವಾನೆ ಅವರು ನಿರ್ದೇಶಿಸಿದ್ದು, ಚಿತ್ರನಿರ್ಮಾಪಕ ಅನುರಾಗ್‌ ಕಶ್ಯಪ್‌ ಕೂಡಾ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು