ನವರಸ ನಾಯಕ ಜಗ್ಗೇಶ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 45 ವರ್ಷಗಳು ತುಂಬಿವೆ. ಅವರು ಚಿತ್ರರಂಗ ಪ್ರವೇಶಿಸಿದ ಆರಂಭದ ದಿನಗಳ ಬಗ್ಗೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟ್ನಲ್ಲಿ ಏನಿದೆ?

1980 ನವೆಂಬರ್ 17ನೇ ತಾರೀಖು. ಆಗ ನನಗೆ 18 ವರ್ಷ. ನಾನು ಬಣ್ಣಹಚ್ಚಿ ನಟಿಸಿದ ಚಿತ್ರ ‘ಕನ್ನಡತಿ ಮಾನವತಿ‘. ಸ್ಥಳ ಗುಬ್ಬಿ ಚನ್ನಬಸವೇಶ್ವರ ಆಲಯ..ಬಣ್ಣ ಹಚ್ಚಿದವರು ಅಂಬರೀಶ್ ಅವರ ಮೇಕಪ್ ಮಾಡುತ್ತಿದ್ದ ರಾಮಕೃಷ್ಣ ಹಾಗೂ ಅವರ ಶಿಷ್ಯ ಕೃಷ್ಣ. ಪಾತ್ರ ಕೊಡಿಸಿದವ ನನ್ನ ಮಿತ್ರ ಶಂಭು. ನನಗೆ ಮೀಸೆ ಬರೆದವರು ಹಾಸ್ಯನಟ ರನ್ನಾಕರ್. ಚಿತ್ರದ ನಾಯಕ ರಾಮಕೃಷ್ಣ, ನಾಯಕಿ ಪ್ರಮೀಳ ಜೋಯ್ಸ್, ನನ್ನ ಜೊತೆ ನಟಿಸಿದ ನಟಿ ಸಿಹಿಕಹಿ ಗೀತ ಅಕ್ಕ, ಚಿತ್ರ ಬಿಡುಗಡೆ ಆಗಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಪ್ರೇಕ್ಷಕರ ಪ್ರೀತಿ ಚಪ್ಪಾಳೆಯಿಂದ ಬೆಳೆದುನಿಂತೆ..

ನನ್ನ ಅದೃಷ್ಟ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮಗ ಮುರಳಿ ಅವರ ಚಿತ್ರ ‘ಬಿಳಿ ಗುಲಾಬಿ‘. ಸಿಗಲು ಕಾರಣವಾದರು ಪುಟ್ಟಣ್ಣ ಕಣಗಲ್ ಅವರ ಸಹಾಯಕ ನಿರ್ದೇಶಕ ದಿವಂಗತ ಅರಕಲಗೂಡು ನಂಜುಂಡ, ನಂತರ ಕೆವಿ.ಜಯರಾಂ ರವರ ಕೃಪೆಯಿಂದ ರವರ ‘ಇಬ್ಬನಿ ಕರಗಿತು‘ ನಲ್ಲಿ ಮುಂದುವರೆದು, 1984ರಲ್ಲಿ ‘ಶ್ವೇತ ಗುಲಾಬಿ‘. ಚಿತ್ರದ ಅವಕಾಶ ಸಿಕ್ಕು ನಂತರ ಪರಿಮಳ ನಾನು ಮದುವೆಯಾಗಿ ಸ್ಟೇಷನ್ ಸುಪ್ರೀಂ ಕೋರ್ಟು ಅವಾಂತರ ಮುಗಿಸಿ ನಂತರ ಹಿಂದೆ ನೋಡದೆ ರಾಯರ ಕೃಪೆಯಿಂದ ಅಂದಿನ ಕನ್ನಡ ಪ್ರೇಕ್ಷಕರ ಪ್ರೀತಿ ಚಪ್ಪಾಳೆಯಿಂದ ವಿವಿಧ ಪಾತ್ರ ಮಾಡುತ್ತ ಬೆಳೆದುನಿಂತೆ ಎಂದಿದ್ದಾರೆ.

ಹೊಸ ಕಲಾವಿದನ್ನು, ಹರಸಿ ಬೆಳೆಸಿ

ಇಂದಿಗೆ ನನ್ನ ಸಿನಿಮಾ ಪ್ರಯಾಣಕ್ಕೆ 45 ವರ್ಷ ಆಯುಷ್ಯ. ನಡೆದು ಬಂದ ದಾರಿ ನೆನಪಿನ ಬುತ್ತಿ. ಮುಂದೆಯು ನಿಮ್ಮ ಪ್ರೀತಿ ನನ್ನ ಮೇಲಿರಲಿ. ನನ್ನಂತೆ ಮುಂದೆ ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರನ್ನು ಹರಸಿ ಬೆಳೆಸಿ ಎಂದೂ ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.