ಚೆನ್ನೈ: ಜನರಿಗೆ ಒಳ್ಳೆಯದು ಮಾಡಲು ರಾಜಕಾರಣಿಯೇ ಆಗಬೇಕಾಗಿಲ್ಲ, ಅಧಿಕಾರ ಇಲ್ಲದಿದ್ದರೂ ನಟನಾಗಿ ಗಳಿಸಿದ ಪ್ರೀತಿ, ಅಭಿಮಾನದಿಂದ ಸಹಕರಿಸಬಹುದು ಎಂದು ನಟ ಶಿವರಾಜಕುಮಾರ್ ಹೇಳಿದ್ದಾರೆ.
.ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ‘ಬಾಹುಬಲಿ‘ ನಟಿ ತಮನ್ನಾ ಭಾಟಿಯಾ.
ಚೆನ್ನೈನಲ್ಲಿ ಭಾನುವಾರ ನಡೆದ ‘45’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜಕುಮಾರ್ ಅವರು, ‘ನನಗೆ ರಾಜಕೀಯ ಅರ್ಥವಾಗಲ್ಲ. ಅಧಿಕಾರ ಅಥವಾ ಬಿರುದು ಇಲ್ಲದಿದ್ದರೂ ನಾನು ಬಡವರಿಗೆ ಸಹಾಯ ಮಾಡಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಟ ಉಪೇಂದ್ರ, ರಾಜ್ ಬಿ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ತಮಿಳು ನಟ ವಿಜಯ್ ಆ್ಯಂಟನಿ ಭಾಗಿಯಾಗಿದ್ದರು.

ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಉಪೆಂದ್ರ ಅವರು, ‘ಅರ್ಜುನ್ ಜನ್ಯ ಅವರ ‘45’ ಸಿನಿಮಾದ ಯೋಜನೆಯನ್ನು ನಿರ್ಮಾಪಕರಿಗೆ ತೋರಿಸಲು ಕೆಲವು ವರ್ಷಗಳ ಹಿಂದೆಯೇ ಅನಿಮೇಟೆಡ್ ಮತ್ತು ಹಿನ್ನಲೆ ಸಂಗೀತ ರಚಿಸಿದ್ದರು ಎಂದು ಜನ್ಯ ಅವರ ಕೆಲಸವನ್ನು ಕೊಂಡಾಡಿದ್ದಾರೆ.
.ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು.
ರಾಜ್ ಬಿ ಶೆಟ್ಟಿ ಅವರು ಮಾತನಾಡಿ, ‘ನಾನು ಒಬ್ಬ ನಿರ್ದೇಶಕನಾಗಿ ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಇವರೆಲ್ಲರೂ ಸಿನಿಮಾಕ್ಕಾಗಿ ಕೆಲಸ ಮಾಡುವುದನ್ನು ನೋಡಿದಾಗ ಸ್ವಲ್ಪ ಹೊಟ್ಟೆಕಿಚ್ಚು ಆಗುತ್ತದೆ. ಇವರಷ್ಟು ನಿಷ್ಠೆಯನ್ನು ನಾನು ತೋರಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರವು ಡಿಸೆಂಬರ್ 25 ಕ್ರಿಸ್ಮಸ್ ಹಬ್ಬದಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಆಫ್ರೋ ಟಪಾಂಗ್’ ಹಾಡು ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.