ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಏರ್‌ಪೋರ್ಟ್‌ನಲ್ಲೇ ಕೇಕ್ ಕತ್ತರಿಸಿದ ಜಾಹ್ನವಿ, ಅಭಿಮಾನಿಗಳಿಂದ ಮೆಚ್ಚುಗೆ

Last Updated 5 ಮಾರ್ಚ್ 2022, 11:28 IST
ಅಕ್ಷರ ಗಾತ್ರ

ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ವಿಡಿಯೊವೊಂದು ವೈರಲ್ ಆಗಿದ್ದು, ಅಲ್ಲಿ ಅವರು ನಡೆದುಕೊಂಡ ರೀತಿಗೆ ಅವರ ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

ಮುಂಬೈ ವಿಮಾನ ನಿಲ್ದಾಣದೊಳಗೆ ಹೋಗುವ ಮುನ್ನ ನಟಿ ಪಾಪರಾಝಿಗಳಿಂದ (ಫೋಟೊಗ್ರಾಫರ್‌ಗಳು) ಪಡೆದ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸಿದ್ದಾರೆ. ಅವರ ಈ ವಿನಮ್ರ ವರ್ತನೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಳೆ (ಮಾ.06) ಜಾಹ್ನವಿ ಕಪೂರ್ ಅವರು 25 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಫೋಟೊಗ್ರಾಫರ್‌ಗಳು ತಂದಿದ್ದ ಕೇಕ್ ಅನ್ನು ಕತ್ತರಿಸಿದ್ದಾರೆ. ಕೇಕ್ ಅನ್ನು ಫೋಟೊಗ್ರಾಫರ್ ಒಬ್ಬರಿಗೆ ತಿನ್ನಿಸುವ ಮೂಲಕ 'ಸೋ ಸ್ವೀಟ್ ಆಫ್ ಯು' ಎಂದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬಳಿಕ ಫೋಟೊಗ್ರಾಫರ್, ಕಳೆದ ಕೆಲವು ವರ್ಷದ ಹಿಂದೆ ಕೂಡ ತಮ್ಮೊಂದಿಗೆ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ಕುರಿತು ನೆನಪಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಾಹ್ನವಿ, 'ನಾನು ಅದನ್ನು ಮರೆಯುವುದಿಲ್ಲ' ಎಂದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಪಾಪರಾಝಿಗಳ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊಗೆ ಕಾಮೆಂಟ್ ಮಾಡಿರುವ ಅಭಿಮಾನಿಗಳು, ಜಾಹ್ನವಿ ಅವರ ವಿನಮ್ರತೆಯನ್ನು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT