ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

’ಹೇ ರಾಮ್‌’ ಚಿತ್ರಕ್ಕೆ ಶಾರುಕ್ ಸಂಭಾವನೆಯೇ ಪಡೆದಿಲ್ಲ: ಕಲಾಭಿಮಾನಿ ಎಂದ ಕಮಲ್

Published 26 ಜೂನ್ 2024, 12:47 IST
Last Updated 26 ಜೂನ್ 2024, 12:47 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಕ್ ಖಾನ್‌ ಹಾಗೂ ತಮಿಳು ಸೂಪರ್‌ಸ್ಟಾರ್‌ ಕಮಲ್‌ ಹಾಸನ್‌ ಜತೆಯಾಗಿ ನಟಿಸಿದ್ದ ’ಹೇ ರಾಮ್‌’ ಚಿತ್ರಕ್ಕೆ ಶಾರುಕ್ ಸಂಭಾವನೆಯೇ ಪಡೆದಿ‌ಲ್ಲ ಎಂಬ ವಿಚಾರವನ್ನು ಕಮಲ್‌ ಬಹಿರಂಗಪಡಿಸುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

2000ರಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಜತೆಗೆ ನಿರ್ಮಾಣವನ್ನು ಮಾಡಿದ್ದ ಕಮಲ್‌ ಹಾಸನ್, ಶಾರುಕ್ ಜತೆಗೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ಚಿತ್ರದಲ್ಲಿ ನಟಿಸಲು ಶಾರುಕ್ ಸಂಭಾವನೆ ಪಡೆಯದಿರುವುದು ಅವರಿಗೆ ಕಲೆಯ ಮೇಲೆ ಇದ್ದ ಅಪಾರ ಗೌರವವನ್ನು ಸೂಚಿಸುತ್ತದೆ. ಉತ್ತಮ ನಟ ಹಾಗೂ ಕಲಾಭಿಮಾನಿ ಎಂದು ಶಾರುಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ನಟ ಕಮಲ್‌ ಹಾಸನ್.

‘ಹೇ ರಾಮ್‌’ ಚಿತ್ರದ ಪೋಸ್ಟರ್

‘ಹೇ ರಾಮ್‌’ ಚಿತ್ರದ ಪೋಸ್ಟರ್

ನಾವು ಒಟ್ಟಿಗೆ ಕೆಲಸ ಮಾಡುವಾಗ, ಸೂಪರ್‌ಸ್ಟಾರ್‌ ಅಥವಾ ಸೂಪರ್‌ ಡೈರೆಕ್ಟರ್‌ ಎಂಬ ವಿಚಾರವು ನಮ್ಮ ಮಧ್ಯೆ ಬರುವುದಿಲ್ಲ. ನಾವು ಸಾಮಾನ್ಯರಂತೆ ಹಾಗೂ ಸ್ನೇಹಿತರಾಗಿ ಕೆಲಸ ಮಾಡಿದ್ದೇವೆ ಎಂದು ಕಮಲ್ ಹೇಳಿದ್ದಾರೆ.

'ಹಿಂದೂಸ್ತಾನಿ 2: ಝೀರೋ ಟಾಲರೆನ್ಸ್' ಚಿತ್ರವು ಕಮಲ್ ಹಾಸನ್‌ ನಟಿಸಿದ್ದ 1996ರಲ್ಲಿ ತೆರೆಕಂಡ ’ಇಂಡಿಯನ್’ ಚಿತ್ರದ ಮುಂದುವರಿದ ಭಾಗವಾಗಿದೆ. ದ್ವಿಪಾತ್ರದಲ್ಲಿ ಕಮಲ್‌ ಹಾಸನ್‌ ಕಾಣಿಸಿಕೊಂಡಿದ್ದಾರೆ.

ಹಿಂದೂಸ್ತಾನಿ 2 ಚಿತ್ರದಲ್ಲಿ ಮನೀಶಾ ಕೊಯಿರಾಲಾ, ಊರ್ಮಿಳಾ ಮಾತೋಂಡ್ಕರ್ ಮತ್ತು ಕಸ್ತೂರಿ ಶಂಕರ್, ಕಾಜಲ್ ಅಗರ್ವಾಲ್, ಸಿದ್ಧಾರ್ಥ್ ಮತ್ತು ರಾಕುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ನಿರ್ಮಿಸಿದೆ.

ಈ ಚಿತ್ರವು ಜುಲೈ 12ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT