ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಬರ್ಟ್‌ನ ರಿಂಗ್‌ಮಾಸ್ಟರ್‌ 'ತರುಣ್‌ ಸುಧೀರ್‌'

Last Updated 9 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""

ಕನ್ನಡದಲ್ಲಿ ಈವರೆಗೆ ನೋಡಿಲ್ಲದಂತಹ ಸೆಟ್‌ ಕೂಡ ರಾಬರ್ಟ್‌ ಚಿತ್ರದಲ್ಲಿರಲಿದೆ. ಮೇಕಿಂಗ್‌ನಲ್ಲೂ ತುಂಬಾ ಹೊಸತನವನ್ನು ಈ ಚಿತ್ರದಲ್ಲಿ ಪ್ರೇಕ್ಷಕರು ಕಾಣಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ತರುಣ್‌ ಸುಧೀರ್‌.

ಕನ್ನಡ ಚಿತ್ರರಂಗದಲ್ಲಿ ಖಳನಾಯಕನಾಗಿ ಹೆಸರು ಮಾಡಿದ್ದವರು ನಟ ಸುಧೀರ್‌. ಅವರ ಪುತ್ರ ತರುಣ್ ಸುಧೀರ್‌ಗೆ ನಟನೆ ಅಷ್ಟಾಗಿ ಕೈಹಿಡಿಯಲಿಲ್ಲ. ಅವರು ನಿರ್ದೇಶನದ ಟೊಪ್ಪಿ ಧರಿಸಿ, ಭರವಸೆಯ ನಿರ್ದೇಶಕನಾಗಿಗುರುತಿಸಿಕೊಳ್ಳುತ್ತಿದ್ದಾರೆ. ‘ಚೌಕ’ ಚಿತ್ರ ಅವರ ನಿರ್ದೇಶನದಮೊದಲ ಚಿತ್ರ. ಮೊದಲ ಚಿತ್ರದಲ್ಲೇ ಗಾಂಧಿನಗರದ ಮಂದಿಯ ಕಣ್ಣುಗಳನ್ನು ತನ್ನತ್ತ ತಿರುಗಿಸಿಕೊಂಡವರು. ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರಕ್ಕೆ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ದರ್ಶನ್‌ಗೆ ಇದು 53ನೇ ಸಿನಿಮಾ.

ಮೇಕಿಂಗ್‌,ಶೂಟಿಂಗ್‌,ಫಸ್ಟ್‌ ಲುಕ್‌ನಿಂದಲೇ ರಾಬರ್ಟ್‌ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದ ಬಗ್ಗೆ ಹಲವು ಮಾಹಿತಿಗಳನ್ನು ತರುಣ್‌ ಸುಧೀರ್‌ ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

* ರಾಬರ್ಟ್‌ ಚಿತ್ರದ ಕಥೆ ಹುಟ್ಟಿದ್ದು ಹೇಗೆ?

‘ಚೌಕ’ ಸಿನಿಮಾ ಮಾಡುವಾಗ ರಾಬರ್ಟ್‌ ಚಿತ್ರದ ಕಥೆ ಹೊಳೆದಿತ್ತು. ಈ ಚಿತ್ರವೇ ದರ್ಶನ್‌ ಅವರಿಗೆ50ನೇ ಚಿತ್ರವೂ ಆಗಬೇಕಿತ್ತು. ‘ಒಡೆಯ’ ಚಿತ್ರವನ್ನು ನಾನೇ ರಿಮೇಕ್‌ ಮಾಡಬೇಕಾಗಿತ್ತು.‌ ‘ಚೌಕ’ ಸಿನಿಮಾ ನೋಡಿದ ನಂತರ ದರ್ಶನ್‌ ರೀಮೇಕ್‌ ಬೇಡ, ಸ್ವಮೇಕ್‌ ಮಾಡುವಂತೆ ನನಗೆ ಸಲಹೆ ಕೊಟ್ಟರು. ದರ್ಶನ್‌ ಅವರ ಅಭಿಮಾನಿಗಳಷ್ಟೇ ಅಲ್ಲ, ಕುಟುಂಬ ಸಮೇತ ಪ್ರೇಕ್ಷಕರು ಅವರ ಸಿನಿಮಾ ನೋಡಬೇಕೆಂಬ ಕಲ್ಪನೆ ಮೂಡಿದಾಗಲೇ ‘ರಾಬರ್ಟ್’ ಕಥೆ ಹರಳುಗಟ್ಟುತ್ತಾ ಹೋಯಿತು. ಕಥೆಯ ಒಂದು ಎಳೆಯನ್ನು ಹೇಳಿದಾಗ ತಡ ಮಾಡದೆಚಿತ್ರಕಥೆ ಸಿದ್ಧಪಡಿಸಲು ದರ್ಶನ್‌ ಸೂಚಿಸಿದ್ದರು. ಅಲ್ಲಿಂದ ರಾಬರ್ಟ್‌ ಜರ್ನಿ ಶುರುವಾಯಿತು.

* ಯಾವ ಜಾನರ್‌ನ ಸಿನಿಮಾ ಇದು?

ಇದೊಂದು ಸಂಪೂರ್ಣ ಸಾಹಸಮಯ ಮತ್ತು ಕೌಟುಂಬಿಕ ಮನರಂಜನೆಯ ಚಿತ್ರ. ಭಾವುಕತೆಯ ಬಂಧವೂ ಇರಲಿದೆ. ದರ್ಶನ್‌ ಸಿನಿಮಾ ಎಂದ ಮೇಲೆ ಫೈಟ್‌ ಕೂಡ ಇರಲೇಬೇಕು. ಈ ಚಿತ್ರದಲ್ಲಿ ಐದು ಫೈಟ್‌ಗಳಿವೆ. ನಾಲ್ವರು ಸಾಹಸ ನಿರ್ದೇಶಕರು ಈ ಪೈಟ್‌ಗಳಿಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳೂ ಇರಲಿವೆ.

* ರಾಬರ್ಟ್‌ ಶೀರ್ಷಿಕೆಯ ಹಿನ್ನೆಲೆ ಬಗ್ಗೆ ಹೇಳಿ..

ರಾಬರ್ಟ್‌ ಹೆಸರು ‘ಚೌಕ’ ಸಿನಿಮಾದಲ್ಲಿನ ಒಂದು ಪಾತ್ರದ ಹೆಸರಾಗಿತ್ತು. ಆದರೆ, ಈ ಚಿತ್ರದ ಕಥೆಯನ್ನು ರಾಬರ್ಟ್‌ ಹೆಸರು ಇಟ್ಟುಕೊಂಡು ಬರೆದಿರಲಿಲ್ಲ. ಚಿತ್ರದ ಕಥೆಗೂ ಪಾತ್ರಕ್ಕೂ ಶೀರ್ಷಿಕೆ ಹೊಂದಿಕೆಯಾದ ಕಾರಣಕ್ಕೆ ಎಲ್ಲರೂ ತೀರ್ಮಾನಿಸಿಯೇ ರಾಬರ್ಟ್‌ ಹೆಸರು ಅಂತಿಮಗೊಳಿಸಿದೆವು.

* ರಾಬರ್ಟ್‌ ಹೇಗಿರುತ್ತಾನೆ?

ಕಥೆಯ ಎಳೆ ಹೊಳೆದಾಗಲೇ ಈ ಪಾತ್ರವನ್ನು ಸಾಮಾನ್ಯ ನಟರಿಂದ ನಿರ್ವಹಿಸಲು ಆಗುವುದಿಲ್ಲ. ಇದರಲ್ಲಿ ಯಾರಾದರೂ ಸೂಪರ್‌ಸ್ಟಾರ್‌ ನಟಿಸಬೇಕೆಂದುಕೊಂಡಿದ್ದೆ. ದರ್ಶನ್‌ ಅವರೇ ಈ ಪಾತ್ರಕ್ಕೆ ಸೂಕ್ತ ಎನಿಸಿತ್ತು.

ಇದುವರೆಗೆ ದರ್ಶನ್‌ ಅವರನ್ನು ಪ್ರೇಕ್ಷಕರು ಯಾವ ಗೆಟಪ್‌ನಲ್ಲಿ ನೋಡಿದ್ದಾರೋ ಆ ಅಂಶಗಳ ಜತೆಗೆ ಅವರನ್ನು ಇದುವರೆಗೆ ನೋಡಿಲ್ಲದ ಒಂದು ಎಲಿಮೆಂಟ್ಸ್‌ ಉಳಿದಿತ್ತು. ಪರ್ಫಾಮೆನ್ಸ್‌ ಕೇಂದ್ರಿತವಾಗಿ ಅವರನ್ನು ಕಡಿಮೆ ಜನರು ನೋಡಿದ್ದರು. ದರ್ಶನ್‌ ಈವರೆಗೆ ಟಚ್‌ ಮಾಡದ ಒಂದು ಜಾನರ್‌ ಉಳಿದಿತ್ತು. ಆ ಜಾನರ್‌ನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಅದನ್ನು ನಾವು ಈಗಲೇ ಬಹಿರಂಗಪಡಿಸುವುದಿಲ್ಲ. ಅದೇ ಈ ಚಿತ್ರದ ಪ್ಲಸ್‌ ಪಾಯಿಂಟ್‌ ಮತ್ತುಕುತೂಹಲದ ಅಂಶ.

* ಪಾತ್ರ ವರ್ಗದ ಬಗ್ಗೆ ಹೇಳಿ?

ವಿನೋದ್‌ ಪ್ರಭಾಕರ್‌ ಈ ಚಿತ್ರದಲ್ಲಿ ನಟಿಸಿದ್ದಾರೆ. ಅವರೇ ಮಾಡಬೇಕಾಗಿದ್ದ ತುಂಬಾ ಒಳ್ಳೆಯಪಾತ್ರದಲ್ಲಿ ಅವರುನಟಿಸಿದ್ದಾರೆ.ಅವರ ಪಾತ್ರದ ಬಗ್ಗೆ ನಾವು ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಹಾಗೆಯೇ ತೆಲುಗಿನ ಜಗಪತಿ ಬಾಬು ಖಳನಾಯಕನ ಪಾತ್ರ ನಿಭಾಯಿಸಿದ್ದಾರೆ.

ಚಿತ್ರದ ನಾಯಕಿಆಶಾ ಭಟ್‌ಗೆ ಇದು ಕನ್ನಡದಲ್ಲಿ ಮೊದಲ ಚಿತ್ರ.ನಾಯಕಿಗೆ ಸರಿಸಮಾನ ಪಾತ್ರವನ್ನು ಸೋನಲ್‌ ಮೊಂತೆರೊ ನಿರ್ವಹಿಸಿದ್ದಾರೆ. ದೇವರಾಜ್‌, ರವಿಶಂಕರ್‌, ತೇಜಸ್ವಿನಿ ಪ್ರಕಾಶ್‌, ರವಿ ಕಿಶನ್‌ ತಾರಾಗಣದಲ್ಲಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ.

* ಸಿನಿಮಾ ಆಸಕ್ತಿ ಬಂದಿದ್ದು ಹೇಗೆ?

ನನಗೆ ಮೊದಲಿನಿಂದಲೂ ನಟನಾಗುವ ಕನಸು ಇರಲಿಲ್ಲ. ನಮ್ಮ ತಂದೆ ಬದುಕಿರುವವರೆಗೂ ನನ್ನನ್ನು ಒಬ್ಬ ಕ್ರಿಕೆಟರ್‌ ಆಗಿ ರೂಪಿಸುವಹಂಬಲ ಅವರಿಗಿತ್ತು. ನಾನು ಕಾಲೇಜಿನಲ್ಲಿರುವಾಗ ಕ್ರಿಕೆಟರ್‌ ಆಗಿದ್ದೆ. ತಂದೆಯವರು ತೀರಿ ಹೋದ ನಂತರ ಅವರ ಹೆಸರು ನಿಂತಲ್ಲೇ ನಿಲ್ಲುತ್ತಿದೆ ಎನಿಸಲಾರಂಭಿಸಿತು. ಅವರ ಹೆಸರು ಉಳಿಸಲು ನಾನು ಸಿನಿಮಾ ರಂಗಕ್ಕೆ ಪ್ರವೇಶಿಸಿದೆ.

* ನಿರ್ದೇಶನದತ್ತಹೊರಳಿದ್ದು ಹೇಗೆ?

ಪ್ರೇಮ್‌ ಅವರ ‘ಎಕ್ಸ್‌ಕ್ಯೂಸ್‌ಮಿ’ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್‌ ಶೇಡ್‌ ಪಾತ್ರದಲ್ಲಿ ನಟಿಸಿದೆ. ನಂತರ ಚಪ್ಪಾಳೆ ಸಿನಿಮಾದಲ್ಲೂ ನಟಿಸಿದೆ. ಅದಾದ ನಂತರ ಏಳೆಂಟು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡೆ. ಯಶಸ್ಸು ಸಿಕ್ಕಿರಲಿಲ್ಲ. ನನ್ನ ಸ್ನೇಹಿತ ದಿನಕರ್‌ ತೂಗುದೀಪ ನಿರ್ದೇಶನದ ‘ಜೊತೆ ಜೊತೆಯಲಿ’ ಸಿನಿಮಾ ನನಗೆ ಒಂದು ಬ್ರೇಕ್‌ ನೀಡಿತು. ಆ ಚಿತ್ರದ ಚಿತ್ರಕಥೆ ರಚನೆಯಲ್ಲಿ ನಾನು ಭಾಗಿಯಾಗಿದ್ದೆ. ನನಗೆ ಹೆಚ್ಚು ಆಸಕ್ತಿ ಇರುವುದು ಚಿತ್ರಕಥೆ ರಚನೆ, ನಿರ್ದೇಶನದ ಕಡೆಗೆ ಎನ್ನುವುದು ಮೊದಲ ಬಾರಿಗೆ ಗೊತ್ತಾಯಿತು. ಆ ಚಿತ್ರವು ಯಶಸ್ವಿಯಾಯಿತು. ನಂತರ ದಿನಕರ್‌ ‘ನವಗ್ರಹ’ ಸಿನಿಮಾದ ಚಿತ್ರಕಥೆ ರಚನೆಯಲ್ಲಿ ನನಗೆ ಹೆಚ್ಚು ಅವಕಾಶ ನೀಡಿದ. ನಟನೆ ನನಗೆ ಕೈಹಿಡಿಯುತ್ತಿಲ್ಲ ಎನ್ನುವುದೂ ಅರ್ಥವಾಗಿ ನಿರ್ದೇಶನದತ್ತ ಮುಖ ಮಾಡಿದೆ. ರ‍್ಯಾಂಬೊ, ವಿಕ್ಟರಿ, ಅಧ್ಯಕ್ಷ, ಗಜಕೇಸರಿ, ರನ್ನ ಚಿತ್ರಗಳಲ್ಲಿ ಚಿತ್ರಕಥೆ ರಚನೆ ಮತ್ತು ಸಹ ನಿರ್ದೇಶಕನ ಕೆಲಸ ಒಂದಿಷ್ಟು ಅನುಭವ ನೀಡಿತು.

ರಾಬರ್ಟ್‌ ಚಿತ್ರದಲ್ಲಿ ದರ್ಶನ್‌

* ರಾಬರ್ಟ್‌ ಚಿತ್ರೀಕರಣ ಎಲ್ಲೆಲ್ಲಿ ನಡೆದಿದೆ?

ಒಟ್ಟು 110 ದಿನ ಚಿತ್ರೀಕರಣಕ್ಕೆ ವೇಳಾಪಟ್ಟಿ ಮಾಡಿಕೊಂಡಿದ್ದು, ಈಗಾಗಲೇ ನೂರು ದಿನಗಳ ಚಿತ್ರೀಕರಣ ಮಾಡಲಾಗಿದೆ.ಬೆಂಗಳೂರು, ಮೈಸೂರು, ಹೈದರಾಬಾದ್‌, ಚೆನ್ನೈ, ಪಾಂಡಿಚೇರಿ, ವಾರಣಸಿ, ಲಕನೌನಲ್ಲಿ ಚಿತ್ರೀಕರಿಸಲಾಗಿದೆ.ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.

* ಚಿತ್ರ ಯಾವಾಗ ತೆರೆಗೆ ಬರಲಿದೆ?

ಈಗ ಎಡಿಟಿಂಗ್‌ ನಡೆಯುತ್ತಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ. ಅದಕ್ಕಾಗಿ ಬೇಕಾದ ಸಿದ್ಧತೆಗಳು ನಡೆಯುತ್ತಿವೆ.

ಇದೊಂದು ಬಿಗ್‌ ಬಜೆಟ್‌ ಸಿನಿಮಾ. ಮೊದಲು ಕನ್ನಡದ ಮೇಲೆ ನಮ್ಮ ಗಮನ. ಬೇರೆ ಭಾಷೆಗಳಲ್ಲೂ ಈ ಚಿತ್ರ ತೆರೆಗೆ ತರಲು ಹೋಮ್‌ವರ್ಕ್‌ ಮಾಡುತ್ತಿದ್ದೇವೆ.

ರಾಬರ್ಟ್‌ ಚಿತ್ರದಲ್ಲಿಆಶಾ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT