ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಅ. 2ರಂದು ಬಿಡುಗಡೆಯಾಗಿ ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿತ್ತು.
ಚಿತ್ರ: ಇನ್‌ಸ್ಟಾಗ್ರಾಮ್
ADVERTISEMENT
‘ಕಾಂತಾರ ಚಾಪ್ಟರ್ 1’ 2025ರಲ್ಲಿ ಅತೀ ಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಕಾಂತಾರ ಚಿತ್ರತಂಡ ಕೇಕ್ ಕತ್ತಿರಿಸುವ ಮೂಲಕ ಆ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಾಚರಣೆಯ ಫೋಟೊಗಳನ್ನು ಹಂಚಿಕೊಂಡಿದೆ. ಅದರಲ್ಲಿ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ, ರುಕ್ಮಿಣಿ ವಸಂತ್, ವಿಜಯ್ ಕಿರಗಂದೂರು ಸೇರಿದಂತೆ ಸಾಕಷ್ಟು ಜನರು ಭಾಗಿಯಾಗಿದ್ದನ್ನು ಕಾಣಬಹುದು.
ಚಿತ್ರ: ಇನ್‌ಸ್ಟಾಗ್ರಾಮ್
ಫೋಟೊ ಜೊತೆಗೆ ‘ಈ ಗೆಲುವು ಕೇವಲ ನಮ್ಮದಲ್ಲ, ಎಲ್ಲರದ್ದು. ನಿಮ್ಮ ಪ್ರೀತಿಗೆ ಎಂದೆಂದಿಗೂ ಋಣಿ. ಕಾಂತಾರ ಅಧ್ಯಾಯ 1ರ ಪ್ರಯಾಣವು ಸ್ಮರಣೀಯವಾಗಿದೆ. ಆಚರಿಸಲು ನಾವು ಒಂದು ತಂಡವಾಗಿ ಒಟ್ಟುಗೂಡಿದ್ದೇವೆ.
ಚಿತ್ರ: ಇನ್‌ಸ್ಟಾಗ್ರಾಮ್
ಆದರೆ ಈ ಗೆಲುವು ನಿಜವಾಗಿಯೂ ನಿಮಗೆ ಅಂದರೆ ಪ್ರೇಕ್ಷಕರಿಗೆ ಸೇರಿದೆ. ಒಟ್ಟಿಗೆ ನಿಂತು, ಈ ಐತಿಹಾಸಿಕ ಓಟಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ನಾವು ಕೆಲಸದಲ್ಲಿ ನಮ್ಮ ಹೃದಯವನ್ನು ಧಾರೆಯೆರೆಯುತ್ತಿದ್ದೇವೆ’ ಎಂದು ಅಡಿ ಬರಹ ಹಾಕಿಕೊಂಡಿದ್ದಾರೆ.