ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕಪಿಲ್‌ ಶರ್ಮಾ ಶೋನ ಮಾಜಿ ನಟ

Published 14 ಜೂನ್ 2023, 11:28 IST
Last Updated 14 ಜೂನ್ 2023, 11:28 IST
ಅಕ್ಷರ ಗಾತ್ರ

ಜನಪ್ರಿಯ ಹಾಸ್ಯ ನಟ ಕಪಿಲ್‌ ಶರ್ಮಾ ಅವರ ಜೊತೆ ಕೆಲಸ ಮಾಡಿದ್ದ ನಟ ತೀರ್ಥಾನಂದ ರಾವ್‌ ಫೇಸ್‌ಬುಕ್‌ ಲೈವ್‌ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

2016ರಲ್ಲಿ ತೀರ್ಥಾನಂದ ರಾವ್ ಅವರು ಕಪಿಲ್ ಶರ್ಮಾ ಅವರೊಂದಿಗೆ 'ಕಾಮಿಡಿ ಸರ್ಕಸ್ ಕೆ ಅಜೂಬೆ' ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಜೂನಿಯರ್‌ ನಾನಾ ಪಟೇಕರ್‌ ಪಾತ್ರ ನಿರ್ವಹಿಸಿ ಶಹಬ್ಬಾಸ್‌ ಗಿರಿ ಪಡೆದಿದ್ದರು. ಗುಜರಾತಿ ಸಿನಿಮಾದ ಕಾರಣಕ್ಕೆ ಕಾಮಿಡಿ ಶೋ ತೊರೆದಿದ್ದರು.

ತಮ್ಮ ಆತ್ಮಹತ್ಯೆಗೆ ಪ್ರೇಯಸಿಯೇ ಕಾರಣ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತೀರ್ಥಾನಂದ, ಫೇಸ್‌ಬುಕ್‌ ಲೈವನಲ್ಲಿಯೇ ಕೀಟನಾಶಕ ಕುಡಿದಿದ್ದಾರೆ. ವಿಷಯ ತಿಳಿದ ಸ್ನೇಹಿತರು ತಕ್ಷಣ ತೀರ್ಥಾನಂದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್ ತಿಂಗಳಿಂದ ಹುಡುಗಿಯೊಬ್ಬರ ಜೊತೆ ಸಂಬಂಧ ಹೊಂದಿದ್ದು ಆಕೆಯಿಂದಲೇ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುವುದಾಗಿ ಲೈವ್‌ನಲ್ಲಿ ತಿಳಿಸಿದ್ದಾರೆ.

‘ಆಕೆ ನನ್ನ ಮೇಲೆ ಪೊಲೀಸ್‌ ದೂರು ನೀಡಿದ್ದು, ಮದುವೆಯಾಗುವಂತೆ ಬೆದರಿಕೆ ಒಡ್ಡಿದ್ದಾಳೆ. ನಾನು ಸಾಲಗಾರನಾಗಿದ್ದು, ಆಕೆಯೇ ನನ್ನ ಮನಸ್ಥಿತಿ ಮತ್ತು ಹಣಕಾಸಿನ ಸ್ಥಿತಿಗೆ ಕಾರಣ‘ ಎಂದು ದೂರಿದ್ದಾರೆ.

ತೀರ್ಥಾನಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಲಾಕ್‌ಡೌನ್‌ ಸಮಯದಲ್ಲೂ ಹಣಕಾಸಿನ ವಿಷಯಕ್ಕೆ ತೀರ್ಥಾನಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT