ಮಂಗಳವಾರ, ಏಪ್ರಿಲ್ 20, 2021
27 °C

ಲಾಕ್‌ಡೌನ್‌: ಕತ್ರಿನಾ ಕೈಫ್‌ ಏನು ಮಾಡುತ್ತಿದ್ದಾರೆ ಗೊತ್ತೆ? ಪೊರಕೆ ಹಿಡಿದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕೊರೊನಾ ವೈರಸ್‌ ಹಾವಳಿಯಿಂದಾಗಿ ವಿಶ್ವದ ಸಿನಿಮಾರಂಗವೇ ಸ್ತಬ್ಧವಾಗಿದೆ. ಸದಾ ಚಟುವಟಿಕೆಯಲ್ಲಿರುವ ಸಿನಿಮಾ ಮಂದಿ ಮನೆಯಲ್ಲಿ ಏನು ಮಾಡುತ್ತಿರಬಹುದು ಎಂಬುದು ಎಲ್ಲರ ಕುತೂಹಲವಾಗಿದೆ. ಇದೀಗ ಬಾಲಿವುಡ್‌ ಹಾಟ್‌ ನಟಿ ಕತ್ರಿನಾ ಕೈಫ್‌ ಏನು ಮಾಡುತ್ತಿದ್ದಾರೆ ನೋಡೊಣ ಬನ್ನಿ...

ಇತ್ತೀಚೆಗೆ ಪಾತ್ರೆ ತೊಳೆಯುವುದು ಹೇಗೆ ಅಂತ ಪಾಠ ಮಾಡಿದ್ದ ಕತ್ರಿನಾ ಇದೀಗ ಕಸ ಗುಡಿಸುವುದು ಹೇಗೆ ಎಂಬುದನ್ನು ತೊರಿಸಿಕೊಟ್ಟಿದ್ದಾರೆ. ಅದರ ಜತೆಗೆ ಕ್ರಿಕೆಟ್‌ ಆಡುವುದನ್ನು ಹೇಳಿಕೊಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ.

ಈ ಹಿಂದೆ ಸೂರ್ಯವಂಶಿ ಸಿನಿಮಾದ ಚಿತ್ರೀಕರಣದ ವೇಳೆ ಪೊರಕೆ ಹಿಡಿದು ಕಸ ಹೊಡೆದಿದ್ದರು. ಆಗ ಅಕ್ಷಯ್‌ ಕುಮಾರ್‌ ಸ್ವಚ್ಛ ಭಾರತದ ರಾಯಭಾರಿ ಎಂದು ಕಾಲೆಳೆದಿದ್ದರು. ಈ ವಿಡಿಯೊ ಕೂಡ ಸಾಕಷ್ಟು ವೈರಲ್‌ ಆಗಿತ್ತು.

ತಮ್ಮ ತಂಗಿ ಜೊತೆ ಮನೆಯಲ್ಲಿರುವ ಕತ್ರಿನಾ ಪೊರಕೆ ಹಿಡಿದು ಮನೆಯ ಕಸವನ್ನು ಸ್ವಚ್ಛಗೊಳಿಸುತ್ತಕಾಲ ಕಳೆಯುತ್ತಿದ್ದಾರೆ. ಕತ್ರಿನಾ ಕಸ ಹೊಡೆಯುತ್ತಿರುವುದನ್ನು ತಂಗಿ ವಿಡಿಯೊ ಮಾಡಿದ್ದಾರೆ. ಕಸ ಪೊರಕೆಯನ್ನು ಬ್ಯಾಟ್‌ ಮಾಡಿಕೊಂಡು ಕ್ರಿಕೆಟ್ ಆಡಿದ್ದಾರೆ. ಇದಕ್ಕೆ ಪೂರಕವಾಗಿ ತಂಗಿ ವೀಕ್ಷಕ ವಿವರಣೆಯನ್ನು ನೀಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದು ಇದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ. ಸದ್ಯ ಕತ್ರಿನಾ ಅಕ್ಷಯ್ ಕುಮಾರ್ ಜತೆ ಸೂರ್ಯವಂಶಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಕೊರೊನಾ ಭೀತಿಯಿಂದಾಗಿ ಈ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು