ಚಂದನ್ ನಿರ್ದೇಶಿಸಿ, ನಟಿಸಿರುವ ‘ಫ್ಲರ್ಟ್’ ಚಿತ್ರ ಕುರಿತು ನಟ ಕಿಚ್ಚ ಸುದೀಪ್ ಅವರು
ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಫ್ಲರ್ಟ್‘ ಚಿತ್ರ ಕುರಿತು ಮಾತನಾಡಿರುವ ಕಿಚ್ಚ ಸುದೀಪ್ ಅವರು, ‘ಚಂದನ್ ಅವರ ಮೊದಲ ನಿರ್ದೇಶನದ ಚಿತ್ರವಾದರೂ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಒಳ್ಳೆಯ ಅಭಿಪ್ರಾಯ ನೀಡುತ್ತಿದ್ದಾರೆ. ನಾನು ಕೂಡ ಈ ಚಿತ್ರವನ್ನು ವೀಕ್ಷಿಸಿದ್ದೇನೆ. ಚಿತ್ರತಂಡಕ್ಕೆ ಶುಭ ಕೋರುತ್ತೇನೆ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು 'ಪ್ಲರ್ಟ್' ಮಾಡುವ ಹುಡುಗನ ಕಥೆ. ಕಿರುತೆರೆಯಿಂದ ಹಿರಿತೆರೆಗೆ ಬಂದ ಚಂದನ್ ಕುಮಾರ್ ಚೊಚ್ಚಲ ನಿರ್ದೇಶನದ ಚಿತ್ರವಿದು.
.ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಕಿರಣ್ ರಾಜ್: ಶುಭಕೋರಿದ ರಕ್ಷಿತ್ ಶೆಟ್ಟಿ.
ಕಥಾನಾಯಕ ಕೃಷ್ಣ ಜಿಮ್ ಟ್ರೈನರ್ ಪಾತ್ರದಲ್ಲಿ ಚಂದನ್, ಸನಿಹಳಾಗಿ ನಿಮಿಕಾ ರತ್ನಾಕರ್, ನ್ಯಾಯಾಧೀಶರಾಗಿ ನಟ ಅವಿನಾಶ್ ನಟಿಸಿದ್ದು, ಶ್ರುತಿ, ಸಾಧು ಕೋಕಿಲ, ಗಿರೀಶ್ ಶಿವಣ್ಣ, ವಿನಯ್ ಗೌಡ ತಾರಾಬಳಗದಲ್ಲಿದ್ದಾರೆ.

ಈ ಚಿತ್ರದಲ್ಲಿ ಸುದೀಪ್ ಅವರು ಹಾಡಿರುವ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಎಚ್.ಸಿ.ವೇಣು ಅವರ ಛಾಯಾಚಿತ್ರಗ್ರಹಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.