ಬುಧವಾರ, ಏಪ್ರಿಲ್ 1, 2020
19 °C

ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ‘ಕೊಡಗ್‌ರ ಸಿಪಾಯಿ’ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಡಿಕೇರಿ: ಬೆಂಗಳೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕೊಡಗ್‌ರ ಸಿಪಾಯಿ (ಕೊಡವ ಭಾಷಾ ಚಲನಚಿತ್ರ) ಆಯ್ಕೆಯಾಗಿದೆ. ತೀತಿಮಾಡ ಅರ್ಜುನ್ ದೇವಯ್ಯ ಹಾಗೂ ತೇಜಸ್ವಿನಿ ಶರ್ಮ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರಿನಲ್ಲಿ ಇದೇ 26ರಿಂದ ಮಾರ್ಚ್‌ 4ರ ವರೆಗೆ ನಡೆಯುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲು ಆಯ್ಕೆಯಾಗಿದೆ. ಚಿತ್ರೋತ್ಸವಕ್ಕೆ 220ಕ್ಕೂ ಅಧಿಕ ಚಿತ್ರಗಳು ಪ್ರದರ್ಶನಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಕೊಡವರ ಸಿಪಾಯಿ ಸೇರಿದಂತೆ 25 ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಕೊಡವರ ಸಿಪಾಯಿ ಕೋಲ್ಕತ್ತಾದಲ್ಲಿ ನಡೆದ ಅಂತರರಾಷ್ಟ್ರೀಯ ‘ಸಿನಿ ಉತ್ಸವ’ದಲ್ಲಿಯೂ ಪ್ರದರ್ಶನ ಕಂಡಿತ್ತು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆಕಂಡಿದ್ದ ಕೊಡವರ ಸಿಪಾಯಿ ಕೊಡಗಿನ ಬಹುತೇಕ ಊರುಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಮೈಸೂರು ಕೊಡವ ಸಮಾಜದಲ್ಲಿಯೂ ಪ್ರದರ್ಶನ ಕಂಡ ಕೊಡವರ ಸಿಪಾಯಿ ಫೆ.28ರಂದು ಬೆಂಗಳೂರು ಕೊಡವ ಸಮಾಜದಲ್ಲಿಯೂ ಪ್ರದರ್ಶನ ಕಾಣುತ್ತಿದೆ. ಈವರೆಗೆ 100ಕ್ಕೂ ಅಧಿಕ ಪ್ರದರ್ಶನ ಕಂಡಿದೆ. ಕೊಡಗಿನ ಸೈನಿಕರೊಬ್ಬರು ಕರ್ತವ್ಯದಿಂದ ನಿವೃತ್ತನಾದ ಬಳಿಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ನಿವೃತ್ತ ಯೋಧನ ಬದುಕು ಬವಣೆಯ ಕಥೆ ಚಿತ್ರದಲ್ಲಿದೆ. ಉಳುವಗಂಡ ಕಾವೇರಿ ಅವರ ಚಿತ್ರಕಥೆ. ಕೊಟ್ಟುಕತ್ತೀರ ಪ್ರಕಾಶ್ ಕಾಯ೯ಪ್ಪ ನಿರ್ದೇಶನವಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು