ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ದೀಪಾವಳಿ ಹಬ್ಬಕ್ಕೆ ತಮ್ಮ ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ‘ಲೈಫ್ ಈಸ್ ಕ್ಯಾಸಿನೋ’ ಹಾಡು ಸಿಕ್ಕಾಪಟ್ಟೆ ಹರಿದಾಡುತ್ತಿದೆ. ವಿಶೇಷ ಏನೆಂದರೆ ಸಿಕ್ಸರ್ ಕಿಂಗ್, ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹಾಗೂ ಚಂದನ್ ಶೆಟ್ಟಿ ಸಂಯೋಜನೆಯಲ್ಲಿ ‘ಲೈಫ್ ಈಸ್ ಕ್ಯಾಸಿನೋ’ ಹಾಡು ಮೂಡಿ ಬಂದಿದೆ.
.ಬೆಂಗಳೂರು ಕಾಲ್ತುಳಿತ | ನನಗೆ ಉಸಿರಾಡಲು ಕಷ್ಟವಾಗಿತ್ತು: ಚಂದನ್ ಶೆಟ್ಟಿ.ಬೆಳ್ಳಿತೆರೆಯಲ್ಲೂ ಚಂದನ್ ಶೆಟ್ಟಿ-ನಿವೇದಿತಾ ಜೋಡಿ! ಸೈಕೋಥ್ರಿಲ್ಲರ್ ಚಿತ್ರ.
ಹೌದು, ಕ್ರಿಸ್ ಗೇಲ್ ಅವರು ಆರ್ಸಿಬಿ ತಂಡ ಸೇರಿದಾಗಿನಿಂದ ಅವರ ಅದೃಷ್ಟ ಬದಲಾಗಿತ್ತು. ಕ್ರಿಸ್ ಗೇಲ್ ಐಪಿಎಲ್ನಲ್ಲಿ ಆರ್ಸಿಬಿಗೆ ರನ್ಗಳ ಮಳೆಯನ್ನೇ ಸುರಿಸುತ್ತಿದ್ದರು. ಕ್ರಿಸ್ ಗೇಲ್ ಹೊಡೆಯುವ ಪ್ರತಿ ಬಾಲ್ ಕೂಡ ಬೌಂಡರಿ ಲೈನ್ ದಾಟುತ್ತಿತ್ತು. ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ತಂಡದ ಆಟಗಾರರಾಗಿದ್ದರೂ ಕೂಡ ಕನ್ನಡಿಗರು ಇವರನ್ನ ಮೆಚ್ಚಿಕೊಂಡಿದ್ದರು.

ಕ್ರಿಸ್ ಗೇಲ್ರ ಪ್ರೀತಿ, ಕ್ರೀಡಾ ಸ್ಪೂರ್ತಿಗೆ ಅಭಿಮಾನಿಗಳು ಮನಸೋತಿದ್ದರು. ಆರ್ಸಿಬಿಯಲ್ಲಿ ಇದ್ದಷ್ಟೂ ವರ್ಷ ಕ್ರಿಸ್ಗೇಲ್ರನ್ನ ಕೊಂಡಾಡಿದ್ದರು. ಕ್ರಿಸ್ ಗೇಲ್ ಕೂಡ ಕನ್ನಡಿಗರ ಮೇಲೆ ಅಷ್ಟೇ ಪ್ರೀತಿಯನ್ನು ತೋರಿಸಿದ್ದರು. ಆರ್ಸಿಬಿ ತಂಡದಿಂದ ಕ್ರಿಸ್ ಗೇಲ್ ಹೊರ ಹೋದಾಗಿನಿಂದ ಕನ್ನಡಿಗರು ಕ್ರಿಸ್ ಗೇಲ್ರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈಗ ಮತ್ತೆ ಕನ್ನಡಿಗರ ಮನಗೆಲ್ಲಲು ಗಾಯಕ ಚಂದನ್ ಶೆಟ್ಟಿ ಜೊತೆಗೆ ಕ್ರಿಸ್ ಗೇಲ್ ಎಂಟ್ರಿ ಕೊಟ್ಟಿದ್ದಾರೆ.

ಈ ಹಾಡಿನಲ್ಲಿ ಚಂದನ್ ಶೆಟ್ಟಿ ಇಡೀ ಜೀವನವನ್ನು ಒಂದು ಜೂಜಿನ ಆಟಕ್ಕೆ ಹೋಲಿಸಿದ್ದಾರೆ. ಅದರಲ್ಲಿ 'ಹಣವೇ ಎಲ್ಲಾ, ದುಡ್ಡಿನ ಮುಂದೆ ಏನು ಇಲ್ಲ ಎಂದು ಸಾಹಿತ್ಯ ಬರೆದಿದ್ದಾರೆ. ಇದೀಗ ದೀಪಾವಳಿ ಹಬ್ಬದ ನಿಮಿತ್ತ ‘ಲೈಫ್ ಈಸ್ ಕ್ಯಾಸಿನೋ’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಇದೇ ಹಾಡು ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.