ನಟ ಅನೀಶ್ ತೇಜೇಶ್ವರ್ ಎರಡನೇ ಸಲ ನಿರ್ದೇಶನದ ಯತ್ನ ಮಾಡಿರುವುದು ಗೊತ್ತೇ ಇದೆ. ಅವರ ನಿರ್ದೇಶನದ ‘ಲವ್ ಒಟಿಪಿ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಸಂಪೂರ್ಣ ಪ್ರೇಮ ಕಥೆಯನ್ನು ಹೊಂದಿರುವ ಚಿತ್ರ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಿದ್ಧಗೊಂಡಿದೆ.

ಅನೀಶ್ ಈ ಹಿಂದೆ ‘ರಾಮಾರ್ಜುನ’ ಚಿತ್ರ ನಿರ್ದೇಶಿಸಿದ್ದರು. ನಟನಾಗಿ ಅವರ ಹಿಂದಿನ ಚಿತ್ರ ‘ಆರಾಮ್ ಅರವಿಂದ ಸ್ವಾಮಿ ಅಷ್ಟೇನು ಯಶಸ್ಸು ಕಂಡಿರಲಿಲ್ಲ. ಅದರ ಬೆನ್ನಲ್ಲೇ ಅನೀಶ್ ನಿರ್ದೇಶನಕ್ಕಿಳಿದಿದ್ದರು. ಭಾವಪ್ರೀತ ಪ್ರೊಡಕ್ಷನ್ಸ್ ಮೂಲಕ ವಿಜಯ್ ಎಂ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ಚಿತ್ರೀಕರಣ ಮುಗಿದು ಬಿಡುಗಡೆ ಹಂತಕ್ಕೆ ಬಂದಿದೆ. ಶೀಘ್ರದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇವೆ. ತೆಲುಗಿನ ಹೆಸರಾಂತ ನಟ ರಾಜೀವ್ ಕನಕಾಲ ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಅನೀಶ್ ಜೊತೆಗೆ ಜಾಹ್ನವಿ ಕಲಕೇರಿ, ಆರೋಹಿ ನಾರಾಯಣ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.