ಭಾನುವಾರ, ಮೇ 29, 2022
21 °C

ಜನವರಿ 1ಕ್ಕೆ ‘ಮದಗಜ’ ಚಿತ್ರದ ತೆಲುಗು ಟೀಸರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖ್ಯಾತ ನಟ ಶ್ರೀಮುರುಳಿ ಹಾಗೂ ಆಶಿಕಾ ರಂಗನಾಥ್ ನಟನೆಯ ‘ಮದಗಜ’ ಸಿನಿಮಾದ ತೆಲುಗು ಟೀಸರ್ ಜನವರಿ 1ರ ಬೆಳಿಗ್ಗೆ 10ಗಂಟೆ 10 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಮಹೇಶ್‌ ಕುಮಾರ್ ನಿರ್ದೇಶನ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ.

ಶ್ರೀಮುರುಳಿ ತೆಲುಗು ಟೀಸರ್‌ಗೆ ದನಿ ನೀಡಿದ್ದಾರೆ. ಈ ಚಿತ್ರದ ಕಥೆಯು ತೆಲುಗು ನೆಲಕ್ಕೆ ಹೊಂದುವಂತಿರುವ ಕಾರಣ ತೆಲುಗಿನಲ್ಲೂ ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ. ಚಿತ್ರದ ಕನ್ನಡ ಟೀಸರ್‌ ಡಿಸೆಂಬರ್ 17ರ ಶ್ರೀಮುರುಳಿ ಹುಟ್ಟುಹಬ್ಬದಂದು ಬಿಡುಗಡೆಯಾಗಿತ್ತು. ಪವರ್‌ಫುಲ್ ಡೈಲಾಗ್‌ಗಳಿಂದ ಕೂಡಿದ್ದ ಟೀಸರ್‌ ವೀಕ್ಷಕರಿಗೆ ಇಷ್ಟವಾಗಿತ್ತು. ಇದರಲ್ಲಿ ಟಾಲಿವುಡ್‌ನ ಖ್ಯಾತ ನಟ ಜಗಪತಿ ಬಾಬು ಖಳನಾಯಕನಾಗಿ ನಟಿಸಿದ್ದಾರೆ. ದಕ್ಷಿಣದ ಖ್ಯಾತ ನಟಿ ದೇವಯಾನಿ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ.

ಲಾಕ್‌ಡೌನ್‌ಗೂ ಮೊದಲು ಶೂಟಿಂಗ್‌ಗಾಗಿ ವಾರಾಣಸಿಗೆ ತೆರಳಿತ್ತು ಚಿತ್ರತಂಡ. ಲಾಕ್‌ಡೌನ್‌ ಬಳಿಕ ಶೂಟಿಂಗ್‌ಗೆ ಅನುಮತಿ ಸಿಕ್ಕ ತಕ್ಷಣ ಮೈಸೂರು ಹಾಗೂ ಚಾಮರಾಜನಗರದಲ್ಲಿ ಶೂಟಿಂಗ್ ಮುಂದುವರೆಸಿತ್ತು. ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಚೇತನ್‌ ಕುಮಾರ್ ಹಾಡುಗಳನ್ನು ಬರೆದಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು