ಬುಧವಾರ, ಸೆಪ್ಟೆಂಬರ್ 29, 2021
20 °C

ಬರುತ್ತಿದೆ ಮೀರಾಬಾಯಿ ಚಾನು ಜೀವನಾಧಾರಿತ ಸಿನಿಮಾ: ನಟಿಗಾಗಿ ಹುಡುಕಾಟ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಪಾಲ (ಮಣಿಪುರ):  ಒಲಿಂಪಿಕ್ಸ್‌ ಪದಕ ವಿಜೇತೆ ಸೈಖೋಮ್ ಮೀರಾಬಾಯಿ ಚಾನು ಅವರ ಜೀವನ ಆಧಾರಿತ ಮಣಿಪುರಿ ಚಿತ್ರ ನಿರ್ಮಾಣವಾಗಲಿದೆ.

ಚಿತ್ರದ ಕುರಿತ ಒಪ್ಪಂದಕ್ಕೆ ಚಾನು ಕಡೆಯವರು ಮತ್ತು ಇಂಫಾಲ್ ಮೂಲದ ‘ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್’ ಸಂಸ್ಥೆಯವರು ಶನಿವಾರ ಸಹಿ ಮಾಡಿದ್ದಾರೆ.ಇಂಫಾಲ್ ಪೂರ್ವ ಜಿಲ್ಲೆಯ ನೋಂಗ್‌ಪೋಕ್ ಕಾಕ್ಚಿಂಗ್ ಹಳ್ಳಿಯಲ್ಲಿರುವ ಚಾನು ನಿವಾಸದಲ್ಲಿ ಈ ಒಪ್ಪಂದ ಏರ್ಪಟ್ಟಿದೆ ಎಂದು ಪ್ರಖ್ಯಾತ ನಾಟಕಕಾರ ಮತ್ತು ಚಿತ್ರ ನಿರ್ಮಾಣ ಕಂಪನಿಯ ಮುಖ್ಯಸ್ಥ ಮನೊಬಿ ಎಂ ಎಂ ಪ್ರಕಟಣೆ ನೀಡಿದ್ದಾರೆ. 

ಚಿತ್ರವು ಇಂಗ್ಲಿಷ್‌ ಮತ್ತು ಭಾರತದ ಇತರ ಭಾಷೆಗಳಿಗೆ ಡಬ್‌ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಈ ಕುರಿತು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಮನೋಬಿ, "ನಾವು ಮೀರಾಬಾಯಿ ಚಾನು ಪಾತ್ರವನ್ನು ನಿರ್ವಹಿಸಬಲ್ಲ ನಟಿಗಾಗಿ ಹುಡುಕಾಟ ಆರಂಭಿಸಿದ್ದೇವೆ. ಆಕೆ ಚಾನು ಅವರ ವಯಸ್ಸು, ಎತ್ತರ, ಮೈಕಟ್ಟಿಗೆ ಹೊಂದುವಂತಿರಬೇಕು. ನೋಡಲು ಆಕೆಯನ್ನು ಹೋಲುವಂತಿರಬೇಕು. ಆಯ್ಕೆಯಾದ ನಟಿಗೆ ‌ತರಬೇತಿ ನೀಡಬೇಕು. ಚಾನು ಜೀವನಾಧಾರಿತ ಸಿನಿಮಾದ  ಚಿತ್ರೀಕರಣ ಆರಂಭಿಸಲು ಕನಿಷ್ಠ ಆರು ತಿಂಗಳಾದರೂ ಬೇಕಾಗುತ್ತದೆ,‘ ಎಂದು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು