ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದುಕೊಂಡಿರುವ ನಟಿ ನಯನತಾರಾ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ದಿನ ಅವರು ತೆಲುಗು ನಟ ನಂದಮೂರಿ ಬಾಲಕೃಷ್ಣ ಜೊತೆ ಮುಂದಿನ ಸಿನಿಮಾದಲ್ಲಿ ನಟಿಸುವುದಾಗಿ ಘೋಷಿಸಿದ್ದಾರೆ.

ಈ ಕುರಿತು ‘ವೃದ್ಧಿ ಸಿನೆಮಾಸ್’ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ‘ಸಾಗರಗಳ ಶಾಂತತೆ ಮತ್ತು ಬಿರುಗಾಳಿಗಳ ಉಗ್ರತೆಯನ್ನು ಹೊತ್ತ ರಾಣಿ ನಯನತಾರಾ NBK111 ಸಾಮ್ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ. ಸಿನಿಮಾ ತಂಡದಿಂದ ಆತ್ಮೀಯ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಐತಿಹಾಸಿಕ ಕಥೆ ಹೊಂದಿರುವ ನಂದಮುರಿ ಬಾಲಕೃಷ್ಣ 111ನೇ ಸಿನಿಮಾಗೆ ನಟಿ ನಯನತಾರಾ ನಾಯಕಿಯಾಗಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ನಟಿ ನಯನತಾರಾ ಅವರು ಈ ಹಿಂದೆಯೂ ನಂದಮೂರಿ ಬಾಲಕೃಷ್ಣ ಅವರ ಜೊತೆಗೆ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
.Akhanda 2: ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ–2’ ಡಿ.5ಕ್ಕೆ ತೆರೆಗೆ .ನಂದಮೂರಿ ಬಾಲಕೃಷ್ಣ, ದುನಿಯಾ ವಿಜಯ್ ನಟನೆಯ NBK107 ಚಿತ್ರದ ವಿಶೇಷ ಟೀಸರ್ ಬಿಡುಗಡೆ.
2010ರಲ್ಲಿ ಬೋಯಪತಿ ಶ್ರೀನು ನಿರ್ದೇಶನದ ಸಿಂಹ ಚಿತ್ರದಲ್ಲಿ ಪರದೆಯನ್ನು ಹಂಚಿಕೊಂಡರು. ಇದರಲ್ಲಿ ನಟ ದ್ವಿಪಾತ್ರಗಳನ್ನು ನಿರ್ವಹಿಸಿದ್ದರು. ನಂತರ, 2011ರಲ್ಲಿ ‘ಶ್ರೀ ರಾಮ ರಾಜ್ಯಂ’ ಎಂಬ ಭಕ್ತಿಗೀತೆಯ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇದರಲ್ಲಿ NBK ರಾಮನ ಪಾತ್ರವನ್ನು ನಿರ್ವಹಿಸಿದರೆ, ಮಾಯಾ ಸೀತಾ ದೇವಿಯ ಪಾತ್ರವನ್ನು ನಟಿ ನಯನತಾರಾ ನಿರ್ವಹಿಸಿದರು. 2018ರಲ್ಲಿ ‘ಜೈ ಸಿಂಹ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ 7 ವರ್ಷಗಳ ನಂತರ ಈ ಜೋಡಿ ಮತ್ತೆ ತೆರೆ ಮೇಲೆ ರಾರಾಜಿಸೋದಕ್ಕೆ ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.