ಪಿಂಕಿ ಖ್ಯಾತಿಯ ಪ್ರಿಯಾಂಕ ಚೋಪ್ರಾ ಕೆಲವು ತಿಂಗಳಿನಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರುಸಿಟೆಡಾಲ್ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಭಾರತೀಯ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡುವ ಮೂಲಕ ಬಾಲಿವುಡ್ ಅಂಗಳದಲ್ಲಿ ಸುದ್ದಿಯಾಗುತ್ತಿದ್ದಾರೆ.

ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪೈನಲ್ ಪಂದ್ಯ ವೀಕ್ಷಣೆ ಮಾಡಿದರು. ಅದು ಗೆಳತಿ ನತಶಾ ಪೂನವಾಲ ಜೊತೆ. ನತಶಾ ಪೂನವಾಲ ಖ್ಯಾತ ಉದ್ಯಮಿ ಹಾಗೂಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಂಸ್ಥೆಯ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನವಾಲ ಅವರ ಪತ್ನಿ.

ಈ ಪೈನಲ್ ಪಂದ್ಯದ ವೇಳೆ ಟೆನಿಸ್ ಪ್ರೇಮಿಗಳ ಕಣ್ಣು ನೆಟ್ಟದ್ದು ನತಶಾ ಪೂನವಾಲ ಅವರ ಹ್ಯಾಂಡ್ ಬ್ಯಾಗ್ ಮೇಲೆ. ಯಾಕೆಂದರೆ ಆ ಬ್ಯಾಗ್ ಬೆಲೆ ಸುಮಾರು ₹ 90 ಲಕ್ಷ. ಇದುಹರ್ಮ್ಸ್ ಬಿರ್ಕಿನ್ ಫೌಬರ್ಗ್ ಕಂಪನಿಯ ಬ್ಯಾಗ್ ಆಗಿದೆ. ಈ ಕಂಪನಿ ಜಗತ್ತಿನಲ್ಲೇ ಅತಿ ಹೆಚ್ಚಿನ ಬೆಲೆಯ ಬ್ಯಾಗ್, ವ್ಯಾಲೆಟ್ ಸೇರಿದಂತೆ ಜಾಕೆಟ್‌ಗಳನ್ನು ಉತ್ಪಾದನೆ ಮಾಡುತ್ತದೆ.

ಪಂದ್ಯ ವೀಕ್ಷಣೆ ಮಾಡಲು ನತಶಾ ಪೂನವಾಲ ಅವರು ಈ ದುಬಾರಿ ಬೆಲೆಯ ಹ್ಯಾಂಡ್ ಬ್ಯಾಗ್ ತಂದಿದ್ದರು. ಗೆಳತಿ ಪ್ರಿಯಾಂಕ ಜೊತೆ ಇಡೀ ದಿನ ಕಳೆದದ್ದು ವಿಶೇಷವಾಗಿತ್ತು. ಪ್ರಿಯಾಂಕ ಜೊತೆಗಿರುವ ಆ ದಿನದ ಹಲವು ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನತಶಾ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.