ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಭೀತಿ: 'ಆಸ್ಕರ್ ಪ್ರಶಸ್ತಿ 2021' ಏಪ್ರಿಲ್ 25ಕ್ಕೆ ಮುಂದೂಡಿಕೆ

Last Updated 16 ಜೂನ್ 2020, 4:34 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಚಿತ್ರಮಂದಿರಗಳು ಮತ್ತು ಹಾಲಿವುಡ್‌ನ ಸಿನಿಮಾ ಬಿಡುಗಡೆಗೆ ಪೂರ್ವ ನಿಗದಿ ದಿನಾಂಕಗಳು ಸ್ಥಗಿತಗೊಂಡ ನಂತರ 93ನೇ ಆಸ್ಕರ್ ಪ್ರಶಸ್ತಿಗಳನ್ನು 2021ರ ಏಪ್ರಿಲ್ 25ಕ್ಕೆ ಮುಂದೂಡಲಾಗಿದೆ ಎಂದು ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಅಕಾಡೆಮಿ ತಿಳಿಸಿದೆ.

ಚಿತ್ರಮಂದಿಗಳು ಮತ್ತೆ ತೆರೆಯುವವರೆಗೂ ಅನೇಕ ಸ್ಟುಡಿಯೋಗಳ ಬ್ಲಾಕ್‌ಬಸ್ಟರ್‌ಗಳು ಮತ್ತು ಇಂಡೀ ಆರ್ಟ್‌ ಹೌಸ್‌ನ ಚಲನಚಿತ್ರಗಳು ತಮ್ಮ ಬಿಡುಗಡೆಯ ದಿನಾಂಕಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಯಿತು. ಆಸ್ಕರ್-ಅರ್ಹ ಚಿತ್ರಗಳ ಸ್ಪರ್ಧೆಯ ಪ್ರವೇಶದ ಅರ್ಹತೆಯ ಅವಧಿಯನ್ನು ಡಿಸೆಂಬರ್ 31, 2020 ರಿಂದ ಫೆಬ್ರವರಿ 28, 2021 ರವರೆಗೆ ವಿಸ್ತರಿಸಲಾಗಿದೆ.

'ಚಿತ್ರಗಳ ಪ್ರವೇಶದ ಅರ್ಹತಾ ಅವಧಿ ಮತ್ತು ನಮ್ಮ ಪ್ರಶಸ್ತಿಗಳ ದಿನಾಂಕವನ್ನು ವಿಸ್ತರಿಸುವಲ್ಲಿ ನಮ್ಮ ಆಶಯವೆಂದರೆ, ಚಲನಚಿತ್ರ ನಿರ್ಮಾಪಕರು ಯಾರ ನಿಯಂತ್ರಣವಿಲ್ಲದೆ ಮತ್ತು ಯಾವುದಕ್ಕೂ ದಂಡ ಕಟ್ಟದೆ ತಮ್ಮ ಚಲನಚಿತ್ರಗಳ ಕೆಲಸಗಳನ್ನು ಮುಗಿಸಿ ಬಿಡುಗಡೆ ಮಾಡಲು ಬೇಕಾದ ಅವಕಾಶವನ್ನು ಒದಗಿಸುವುದಾಗಿದೆ' ಎಂದು ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಚಲನಚಿತ್ರೋದ್ಯಮದ ಅತಿದೊಡ್ಡ ರಂಗು ರಂಗಿನ ರಾತ್ರಿಯನ್ನು ಫೆಬ್ರವರಿ 28, 2021 ರಂದು ನಿಗದಿಪಡಿಸಲಾಗಿತ್ತು. ಈಗ ದಿನಾಂಕ ಬದಲಾಗಿದೆ. ಆದರೆ ಏಪ್ರಿಲ್‌ನಲ್ಲಿ ನಡೆಯುವ ಕಾರ್ಯಕ್ರಮವು ಲೈವ್, ನಟ-ನಟಿಯರು ತುಂಬಿದ ಸಮಾರಂಭವಾಗಿ ಉಳಿಯುತ್ತದೆಯೇ ಅಥವಾ 'ವರ್ಚುವಲ್'ಪ್ರಸ್ತುತಿಗೆ ಬದಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಕೋವಿಡ್-19 ಪ್ರಕರಣಗಳ ಎರಡನೇ ಹಂತ ಹೆಚ್ಚುತ್ತಿರುವ ಭೀತಿಯಲ್ಲೇ ಅಮೆರಿಕದ ಚಿತ್ರಮಂದಿರಗಳು ಈಗಾಗಲೇ ಮುಚ್ಚಿವೆ.
ಹಾಲಿವುಡ್ ಚಲನಚಿತ್ರೋದ್ಯಮದ ಉನ್ನತ ಸಂಸ್ಥೆಯಾಗಿರುವ ಅಕಾಡೆಮಿಯು ಈಗಾಗಲೇ ಏಪ್ರಿಲ್‌ನಲ್ಲಿ ಪ್ರವೇಶ ಪಡೆಯುವ ಕೆಲವು ಅರ್ಹತಾ ನಿಯಮಗಳನ್ನು ಸಡಿಲಗೊಳಿಸಿತ್ತು. ಇದು ದೊಡ್ಡ ಪರದೆಯನ್ನು ಬಿಟ್ಟು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಿಸಿಕೊಳ್ಳುವ ಚಲನಚಿತ್ರಗಳಿಗೂ ಈ ವರ್ಷ ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು.

ಈ ಮೊದಲು 1938 ರಲ್ಲಿ ಲಾಸ್ ಏಂಜಲೀಸ್ ಉಂಟಾಗಿದ್ದ ಪ್ರವಾಹದ ನಂತರ, 1968ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹತ್ಯೆ ಮತ್ತು 1981 ರಲ್ಲಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರನ್ನು ಗುಂಡಿಕ್ಕಿ ಕೊಂದ ನಂತರ ಅಕಾಡೆಮಿಯ ಆಸ್ಕರ್ ಪ್ರಶಸ್ತಿಗಳನ್ನು ಮುಂದೂಡಲಾಗಿತ್ತು. ಆದರೆ ಒಂದು ವಾರಗಳಿಗೂ ಅಧಿಕ ಕಾಲ ಮುಂದೂಡಿರಲಿಲ್ಲ. ಇದೀಗ ಕೋವಿಡ್-19 ಭೀತಿಯಿಂದಾಗಿ ಬರೋಬ್ಬರಿ ಎಂಟು ವಾರಗಳ ಕಾಲ ಪ್ರಶಸ್ತಿ ಸಮಾರಂಭವನ್ನು ಮುಂದೂಡಲಾಗಿದೆ.

ಲಾಸ್ ಏಂಜಲೀಸ್‌ನಲ್ಲಿ ಈ ಹಿಂದೆ ಡಿಸೆಂಬರ್‌ನಲ್ಲಿ ತೆರೆಯಲು ನಿರ್ಧರಿಸಿದ್ದ ಅಕಾಡೆಮಿಯ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್ ಈಗ 2021, ಏಪ್ರಿಲ್ 30 ರಂದು ತೆರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT