ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ 2ನೇ ಆವೃತ್ತಿ: ಜನಮೆಚ್ಚಿದ ನಟ ಪ್ರಶಸ್ತಿಗೆ ನಾಮನಿರ್ದೇಶನ

Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಸಮಾರಂಭ ಜೂನ್‌ 28ಕ್ಕೆ ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು ಮತ್ತು ಸಿನಿಮಾಗಳ ಪಟ್ಟಿ ಹಾಗೂ ಪರಿಚಯ–ವಿವರವನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಜನಮೆಚ್ಚಿದ ನಟ’ ವಿಭಾಗದಲ್ಲಿ ಇರುವ ನಟರನ್ನು ಪರಿಚಯಿಸುವ ಸಮಯ. ನಿಮ್ಮ ನೆಚ್ಚಿನ ನಟರಿಗೆ ವೋಟ್‌ ಮಾಡಲು ಈ ಲಿಂಕ್‌ಗೆ ಲಾಗ್‌ಇನ್‌ ಆಗಿ. bit.ly/prajavanicinesammanS2 ವೋಟ್‌ ಮಾಡಲು ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ.
ಶಿವರಾಜ್‌ಕುಮಾರ್‌, ಜಗ್ಗೇಶ್‌, ಗಣೇಶ್‌

ಶಿವರಾಜ್‌ಕುಮಾರ್‌, ಜಗ್ಗೇಶ್‌, ಗಣೇಶ್‌

* ‘ಘೋಸ್ಟ್‌’ ಚಿತ್ರದಲ್ಲಿನ ನಟನೆಗಾಗಿ ಶಿವರಾಜ್‌ಕುಮಾರ್‌ ನಾಮನಿರ್ದೇಶನಗೊಂಡಿದ್ದಾರೆ. 1986ರಲ್ಲಿ ‘ಆನಂದ್‌’ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಕಾಲಿಟ್ಟ ಶಿವರಾಜ್‌ಕುಮಾರ್‌, ಸದ್ಯ ಚಂದನವನದಲ್ಲಿ 38 ವರ್ಷ ಪೂರೈಸಿ ಮುನ್ನಡೆಯುತ್ತಿದ್ದಾರೆ. 125ನೇ ಸಿನಿಮಾ ಪೂರೈಸಿದ ಸಂಭ್ರಮದಲ್ಲಿರುವ ಅವರು ಸದ್ಯ ಗೀತಾ ಪಿಕ್ಚರ್ಸ್‌ನಿಂದ ನಿರ್ಮಾಣವಾಗುತ್ತಿರುವ ‘ಭೈರತಿ ರಣಗಲ್‌’, ಅರ್ಜುನ್‌ ಜನ್ಯ ನಿರ್ದೇಶನದ ‘45’, ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. 

*‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾದಲ್ಲಿನ ನಟನೆಗಾಗಿ ಜಗ್ಗೇಶ್‌ ನಾಮನಿರ್ದೇಶನಗೊಂಡಿದ್ದಾರೆ. ‘ನವರಸ ನಾಯಕ’ ಎಂದೇ ಖ್ಯಾತಿ ಪಡೆದಿರುವ ಜಗ್ಗೇಶ್‌ 60 ಹೊಸ್ತಿಲು ದಾಟಿ 44 ವರ್ಷಗಳ ಸಿನಿ ಪಯಣ ಪೂರೈಸಿದ್ದಾರೆ. 1978ರಲ್ಲಿ ‘ಬನಶಂಕರಿ’ ಎಂಬ ಸಿನಿಮಾ ಮೂಲಕ ಮೊದಲ ಬಾರಿ ತೆರೆಯ ಮೇಲೆ ಕಾಣಿಸಿಕೊಂಡ ಅವರು ಬಳಿಕ 1992ರಲ್ಲಿ ‘ತರ್ಲೆನನ್ಮಗ’ ಚಿತ್ರದಿಂದ ಪೂರ್ಣಪ್ರಮಾಣದ ನಾಯಕ ನಟನಾದರು. 120ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಜಗ್ಗೇಶ್ ನಟನೆ, ನಿರ್ದೇಶನ, ಟಿ.ವಿ. ಕಾರ್ಯಕ್ರಮ, ರಾಜಕಾರಣ–ಹೀಗೆ ಹಲವು ಕ್ಷೇತ್ರಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ.

* ‘ಬಾನದಾರಿಯಲಿ’ ಸಿನಿಮಾದಲ್ಲಿನ ನಟನೆಗಾಗಿ ಗಣೇಶ್‌ ನಾಮನಿರ್ದೇಶನಗೊಂಡಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ ಗಣೇಶ್‌, ‘ಚೆಲ್ಲಾಟ’ ಸಿನಿಮಾ ಮೂಲಕ ನಾಯನ ನಟನಾಗಿ ಬೆಳ್ಳಿತೆರೆಯಲ್ಲಿ ಮಿಂಚಿದರು. ಯೋಗರಾಜ್‌ ಭಟ್‌ ನಿರ್ದೇಶನದ ‘ಮುಂಗಾರು ಮಳೆ’ ಗಣೇಶ್‌ ಸಿನಿಪಯಣದ ದಿಕ್ಕನ್ನೇ ಬದಲಿಸಿತು. ಬಳಿಕ ‘ಚೆಲುವಿನ ಚಿತ್ತಾರ’, ‘ಗಾಳಿಪಟ’, ‘ಚಮಕ್‌’, ‘ಮುಗುಳುನಗೆ’ ಹೀಗೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ ಗಣೇಶ್‌ ಸದ್ಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.     

ನಟ ರಕ್ಷಿತ್‌ ಶೆಟ್ಟಿ
ನಟ ರಕ್ಷಿತ್‌ ಶೆಟ್ಟಿ

*‘ಸಪ್ತ ಸಾಗರದಾಚೆ ಎಲ್ಲೋ–ಸೈಡ್‌ ಎ’ ಚಿತ್ರದಲ್ಲಿನ ನಟನೆಗಾಗಿ ರಕ್ಷಿತ್ ಶೆಟ್ಟಿ ನಾಮನಿರ್ದೇಶನಗೊಂಡಿದ್ದಾರೆ. ‘ನಮ್‌ ಏರಿಯಾಲ್‌ ಒಂದ್‌ ದಿನ’, ‘ತುಗ್ಲಕ್‌’ ಮೂಲಕ ಸಿನಿಪಯಣ ಆರಂಭಿಸಿದ ರಕ್ಷಿತ್‌, ನಂತರದಲ್ಲಿ ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ ಹೇಳಿ ಪ್ರೇಕ್ಷಕರನ್ನು ಸೆಳೆದರು. ‘777 ಚಾರ್ಲಿ’ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚಿದವರು. ‘ಕಿರಿಕ್‌ ಪಾರ್ಟಿ’ ಇವರ ಸಿನಿಪಯಣಕ್ಕೆ ತಿರುವು ನೀಡಿದ ಮತ್ತೊಂದು ಸಿನಿಮಾ. ಕೇವಲ ನಟನಾಗಿಯಷ್ಟೇ ಅಲ್ಲದೆ ನಿರ್ದೇಶನದ ಸಾಮರ್ಥ್ಯವನ್ನು ‘ಉಳಿದವರು ಕಂಡಂತೆ’ ಸಿನಿಮಾ ಮೂಲಕ ತೋರ್ಪಡಿಸಿ, ‘ಪರಂವಃ ಸ್ಟುಡಿಯೋಸ್‌’ ಮೂಲಕ ನಿರ್ಮಾಪಕರಾಗಿಯೂ ಮಿಂಚಿದರು. ಸದ್ಯ ‘ರಿಚರ್ಡ್‌ ಆಂಟನಿ’ಯನ್ನು ಬೆನ್ನತ್ತಿ ಹೊರಟಿದ್ದಾರೆ.        

*‘ಗುರುದೇವ್‌ ಹೊಯ್ಸಳ’ ಸಿನಿಮಾದಲ್ಲಿನ ನಟನೆಗಾಗಿ ಧನಂಜಯ ನಾಮನಿರ್ದೇಶನೊಂಡಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಕನಸೊಂದನ್ನು ಇಟ್ಟುಕೊಂಡು ‘ಜಯನಗರ 4th ಬ್ಲಾಕ್‌’ ಕಿರುಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಿದ್ದ ನಟ ಧನಂಜಯ, ಇದೀಗ ನಟನೆಯ ಜೊತೆಗೆ ಸಿನಿಮಾ ನಿರ್ಮಾಣ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಡಾಲಿ ಪಿಕ್ಚರ್ಸ್‌ ಸಂಸ್ಥೆಯಡಿ ಸಿನಿಮಾ ನಿರ್ಮಾಣ ಮಾಡಿದ ಇವರು, ‘ಕೋಟಿ’ ಸಿನಿಮಾ ಬಳಿಕ ಸದ್ಯ ‘ಉತ್ತರಕಾಂಡ’, ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. 

*‘ಟೋಬಿ’ ಮತ್ತು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಗಳಲ್ಲಿನ ನಟನೆಗಾಗಿ ರಾಜ್‌ ಬಿ.ಶೆಟ್ಟಿ ನಾಮನಿರ್ದೇಶನಗೊಂಡಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಸಿನಿಮಾದ ಮುಖಾಂತರ ಕನ್ನಡದ ಪ್ರೇಕ್ಷಕರ ಮುಂದೆ ನಟನಾಗಿ, ನಿರ್ದೇಶಕನಾಗಿ ಬಂದ ರಾಜ್‌, ನಂತರದಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ರಾಜ್‌ ಯಾವುದೇ ಪಾತ್ರದ ಪರಕಾಯ ಪ್ರವೇಶ ಮಾಡುವ ಸಾಮರ್ಥ್ಯವುಳ್ಳ ನಟ. ಸದ್ಯ ಮಲಯಾಳ ಇಂಡಸ್ಟ್ರಿಗೂ ಹೆಜ್ಜೆ ಇಟ್ಟಿರುವ ರಾಜ್‌ ಸದ್ಯ ಹೊಸ ಕನ್ನಡ ಸಿನಿಮಾವೊಂದರ ಬರವಣಿಗೆಯಲ್ಲಿದ್ದಾರೆ. 

ಧನಂಜಯ, ರಾಜ್‌ ಬಿ.ಶೆಟ್ಟಿ, ಶಿಶಿರ್‌ ಬೈಕಾಡಿ

ಧನಂಜಯ, ರಾಜ್‌ ಬಿ.ಶೆಟ್ಟಿ, ಶಿಶಿರ್‌ ಬೈಕಾಡಿ

*‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರದಲ್ಲಿನ ನಟನೆಗಾಗಿ ಶಿಶಿರ್‌ ಬೈಕಾಡಿ ನಾಮನಿರ್ದೇಶನಗೊಂಡಿದ್ದಾರೆ. ಮೈಸೂರಿನವರಾದ ಇವರು ‘ನಟನ’ ರಂಗಶಾಲೆಯ ವಿದ್ಯಾರ್ಥಿ. ಆರನೇ ವರ್ಷದಿಂದಲೇ ನಟನೆ ಪ್ರಾರಂಭಿಸಿ, ಪಿಯುಸಿ ಮುಗಿಯುತ್ತಿದ್ದಂತೆ ರಂಗಭೂಮಿಯನ್ನು ಗಂಭೀರವಾಗಿ ಪರಿಗಣಿಸಿ, ಅದರಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ಸದ್ಯ ಜಡೇಶ್‌ ಕೆ. ಹಂಪಿ ನಿರ್ದೇಶನದಲ್ಲಿ, ದುನಿಯಾ ವಿಜಯ್‌ ನಟಿಸುತ್ತಿರುವ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.  

ಈ ಕಾರ್ಯಕ್ರಮ ಕ್ಯಾಸಾಗ್ರ್ಯಾಂಡ್ ಪ್ರಸ್ತುತಪಡಿಸುತ್ತಿರುವ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ. Powered by ಅಮೃತ್ ನೋನಿ ರೀಚ್‌ರೂಟ್‌.

ಬ್ಯಾಂಕಿಂಗ್ ಪಾರ್ಟ್ನರ್: ಕೆನರಾ ಬ್ಯಾಂಕ್.

ಮೊಬಿಲಿಟಿ ಪಾರ್ಟ್ನರ್ : ಮಹೀಂದ್ರಾ,

ಏರ್‌ಲೈನ್ ಪಾರ್ಟ್ನರ್: ಸ್ಟಾರ್ ಏರ್,

ಎನರ್ಜಿ ಪಾರ್ಟ್ನರ್: ಕಾಂತಾರ ಪಾನ್ ಮಸಾಲ,

ಶಾರ್ಟ್ ವಿಡಿಯೊ ಪಾರ್ಟ್ನರ್: ಜೋಶ್.

ಸಹಪ್ರಾಯೋಜಕರು : ಫ್ರೀಡಂ ಆಯಿಲ್, ಟಿಟಿಕೆ ಪ್ರೆಸ್ಟೀಜ್, ಹೋಂಡಾ ಶೈನ್, ಇನ್‌ಸೈಟ್ಸ್ ಐಎಎಸ್, ಹೀರೊ ವಿಡಾ, ಸದ್ಗುರು ಆಯುರ್ವೇದ, ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಲಿ.

ಆಡಿಟ್ ಪಾರ್ಟ್ನರ್: ಅರ್ನ್ಸ್ಟ್ & ಯಂಗ್

ಟೆಲಿಕಾಸ್ಟ್ ಪಾರ್ಟ್ನರ್: ಝೀ ಕನ್ನಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT