ಬೆಂಗಳೂರು: ದುಬೈನಲ್ಲಿ ಶನಿವಾರ ನಡೆದ ಸೈಮಾ ಚಲನಚಿತ್ರೋತ್ಸವದಲ್ಲಿ ತೆಲುಗಿನ ಸೂಪರ್ ಹಿಟ್ ಚಿತ್ರ ‘ಪುಷ್ಪ–ದಿ ರೂಲ್’ ಐದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಪ್ರಶಸ್ತಿ ಸ್ವೀಕರಿಸಿದ ಖುಷಿಯಲ್ಲಿದ್ದ ನಿರ್ದೇಶಕ ಸುಕುಮಾರ್, ‘ಪುಷ್ಪ–ದಿ ರೂಲ್’ ಚಿತ್ರದ ಸೀಕ್ವೆಲ್ ‘ಪುಷ್ಪ–ದಿ ರ್ಯಾಂಪೇಜ್’ ನಿರ್ಮಿಸುವ ಕುರಿತಂತೆ ಘೋಷಣೆ ಮಾಡಿದ್ದಾರೆ.

ನಿರ್ದೇಶಕ ಸುಕುಮಾರ್, ನಾಯಕ ಅಲ್ಲು ಅರ್ಜುನ್, ನಾಯಕಿ ರಶ್ಮಿಕಾ ಮಂದಣ್ಣ, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮತ್ತು ಮೈತ್ರಿ ಮೂವಿಸ್ನ ನಿರ್ಮಾಪಕ ನವೀನ್ ಯರ್ನೇನಿ ವೇದಿಕೆ ಮೇಲೆ ಇದ್ದರು. ಈ ಸಂದರ್ಭ ನಿರೂಪಕರು ಪಾರ್ಟಿ ಲೇದಾ ಪುಷ್ಪಾ ಎಂಬ ಪುಷ್ಪ ಚಿತ್ರದ ಮಾಸ್ ಡೈಲಾಗ್ ಹೊಡೆದರು. ಬಳಿಕ, ಪುಷ್ಪ–3 ಮಾಡುತ್ತೀರಾ ಎಂದು ಪ್ರಶ್ನಿಸಿದರು. ಈ ವೇಳೆ, ಅಲ್ಲು ಅರ್ಜುನ್, ನಿರ್ಮಾಪಕರ ಕಡೆ ನೋಡಿದ ಸುಕುಮಾರ್, ಖಂಡಿತವಾಗಿ, ಪುಷ್ಪ–3 ಬರಲಿದೆ ಎಂದು ಹೇಳಿದರು.

ಅಲ್ಲು ಅರ್ಜುನ್ಗೆ ಅತ್ಯುತ್ತಮ ನಟ ಪ್ರಶಸ್ತಿ, ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ, ಸುಕುಮಾರ್ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ದೇವಿ ಪ್ರಸಾದ್ಗೆ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿ, ಮತ್ತು ಶಂಕರ್ ಬಾಬು ಕಂದುಕುರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಲಭಿಸಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಲ್ಲು ಅರ್ಜುನ್, ನಿರಂತರ ಪ್ರೀತಿ ಮತ್ತು ಮನ್ನಣೆಗೆ ಧನ್ಯವಾದಗಳು ಸೈಮಾ. ಸತತ 3 ಸೈಮಾ ಪ್ರಶಸ್ತಿಗಳನ್ನು ಗೆದ್ದಿರುವುದು ನಿಜಕ್ಕೂ ಒಂದು ವಿನಮ್ರ ಕ್ಷಣ. ಎಲ್ಲ ಪ್ರಶಸ್ತಿ ವಿಜೇತರು ಮತ್ತು ನಾಮನಿರ್ದೇಶಿತರಿಗೆ ಅಭಿನಂದನೆಗಳು. ಇದನ್ನು ಸಾಧ್ಯವಾಗಿಸಿದ ಶ್ರೇಯಸ್ಸು ನಮ್ಮ ನಿರ್ದೇಶಕ ಸುಕುಮಾರ್ ಅವರು, ಚಿತ್ರದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಮತ್ತು ಪುಷ್ಪ ಚಿತ್ರದ ಸಂಪೂರ್ಣ ತಂಡಕ್ಕೆ ಸಲ್ಲುತ್ತದೆ. ನಾನು ಈ ಪ್ರಶಸ್ತಿಗಳನ್ನು ನನ್ನ ಅಭಿಮಾನಿಗಳಿಗೆ ಅರ್ಪಿಸುತ್ತೇನೆ... ಅಚಲ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.