ಮಂಗಳವಾರ, ಆಗಸ್ಟ್ 3, 2021
25 °C

ವಿಶ್ವ ಯೋಗ ದಿನ| ಈಜುಕೊಳದಲ್ಲಿ ವರ್ಕೌಟ್: ಹವಾ ಸೃಷ್ಟಿಸಿದ ರಾಧಿಕಾ ಮದನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Radhika Madan Instagram

ಬೆಂಗಳೂರು: ಬಾಲಿವುಡ್‌ ನಟ-ನಟಿಯರು ಫಿಟ್ನೆಸ್ ವಿಚಾರ ಬಂದಾಗ ತಾ ಮುಂದು, ತಾ ಮುಂದು ಎಂದು ಸಾಮಾಜಿಕ ತಾಣಗಳಲ್ಲಿ ವಿವಿಧ ಪೋಸ್ಟ್ ಮಾಡುತ್ತಿರುತ್ತಾರೆ.

ಸೋಮವಾರ, ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರರಂಗದ ಪ್ರಮುಖರು ತಾವೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಿ ಎನ್ನುವ ಸಂದೇಶವನ್ನು ಜನರಿಗೆ ನೀಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ನಟಿ ರಾಧಿಕಾ ಮದನ್ ಈಜುಕೊಳದಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

 

ವರ್ಕೌಟ್ ಮಿಸ್ ಮಾಡಲ್ಲ ಎಂದು ರಾಧಿಕಾ ಮದನ್ ಈ ಪೋಸ್ಟ್‌ಗೆ ಅಡಿಬರಹ ನೀಡಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಅಂಗ್ರೇಜಿ ಮೀಡಿಯಂ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಹೆಸರು ಗಳಿಸಿದ ರಾಧಿಕಾ ಮದನ್, ಫಿಟ್ನೆಸ್ ಕುರಿತು ಹೆಚ್ಚಿನ ಕಾಳಜಿ ಕೂಡ ಹೊಂದಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ವರ್ಕೌಟ್ ಮಾಡದೇ ಇರುವುದಿಲ್ಲ, ಫಿಟ್ನೆಸ್ ತುಂಬಾ ಮುಖ್ಯ ಎಂದು ರಾಧಿಕಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು