ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಚಿತ್ರದಲ್ಲಿ ಜೊತೆಯಾದ ರಮೇಶ್–ಗಣೇಶ್

Published 12 ಸೆಪ್ಟೆಂಬರ್ 2023, 23:30 IST
Last Updated 12 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ‘ಬಾನದಾರಿಯಲ್ಲಿ’ ಇದೇ ತಿಂಗಳು ತೆರೆ ಕಾಣಲಿದೆ. ‘ಕೃಷ್ಣಂ ಪ್ರಣಯ ಸಖಿ’ ಕೈಯಲ್ಲಿದೆ. ‘ಗಾಳಿಪಟ–2’ ನಿರ್ಮಾಪಕರ ಜೊತೆ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ರಮೇಶ್‌ ಅರವಿಂದ್‌ ಕೂಡ ‘ದೈಜಿ’ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದಲ್ಲದೆ ಇನ್ನೆರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಅದರ ನಡುವೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ನಟ ರಮೇಶ್‌ ಅರವಿಂದ್‌ ಒಂದೇ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದ್ದು, ಇಬ್ಬರು ನಟರೂ ವಿದೇಶಿ ಸೈನ್ಯದಲ್ಲಿ ವಿದೂಷಕರ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ನೋಟಕ್ಕೆ ಇಂಗ್ಲಿಷ್‌ ಸಿನಿಮಾದ ಪೋಸ್ಟರ್‌ನಂತೆ ಕಾಣುತ್ತಿದ್ದು, ‘ದಿ ಗ್ರೇಟೆಸ್ಟ್‌ ಶೋ ಎವರ್‌ ಸೀನ್‌’ ಎಂಬ ಅಡಿಬರಹವನ್ನು ಪೋಸ್ಟರ್‌ನಲ್ಲಿ ನೀಡಲಾಗಿದೆ. 

ರಮೇಶ್‌ 107ನೇ ಸಿನಿಮಾ, ಗಣೇಶ್‌ ಅವರ 42ನೇ ಸಿನಿಮಾ ಇದಾಗಿರಲಿದೆ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಮೂಲಕ ‘ಪುಷ್ಪಕ ವಿಮಾನ’, ‘ಇನ್‌ಸ್ಪೆಪೆಕ್ಟರ್ ವಿಕ್ರಂ’ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕ ವಿಖ್ಯಾತ್ ಈ ಸಿನಿಮಾ ಮೇಲೆ ಬಂಡವಾಳ ಹೂಡಿರುವುದರ ಜೊತೆಗೆ ಆ್ಯಕ್ಷನ್‌ ಕಟ್‌ ಕೂಡ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT