ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ₹116 ಕೋಟಿ ಗಳಿಸಿದ ರಣಬೀರ್‌ –ರಶ್ಮಿಕಾ ಅಭಿನಯದ ‘ಅನಿಮಲ್‌’

Published 2 ಡಿಸೆಂಬರ್ 2023, 10:07 IST
Last Updated 2 ಡಿಸೆಂಬರ್ 2023, 10:07 IST
ಅಕ್ಷರ ಗಾತ್ರ

ಮುಂಬೈ: ನಟ ರಣಬೀರ್‌ ಕಪೂರ್‌ ನಟಿಸಿರುವ ‘ಅನಿಮಲ್‌’ ಚಿತ್ರವು ಬಿಡುಗಡೆಗೊಂಡ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು ₹116 ಕೋಟಿ ಗಳಿಸಿಕೊಂಡಿದೆ. ಆ ಮೂಲಕ ತಮ್ಮ ಕೆರಿಯರ್‌ನಲ್ಲೇ ರಣಬೀರ್ ಭರ್ಜರಿ ಓಪನಿಂಗ್ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಟಿ–ಸೀರಿಸ್, ಅನಿಮಲ್‌ ಬೇಟೆ ಪ್ರಾರಂಭಗೊಂಡಿದೆ. ರಣಬೀರ್‌ ಎಲ್ಲಾ ದಾಖಲೆಗಳನ್ನು ಮುರಿಯಲು ಬಂದಿದ್ದಾರೆ. ಇದುವರೆಗೆ ಹಿಂದಿ ಚಿತ್ರರಂಗದಲ್ಲಿ ರಜಾದಿನವಲ್ಲದ ದಿನದಲ್ಲಿ ಬಿಡುಗಡೆಗೊಂಡು, ಮೊದಲ ದಿನವೇ ಅತಿ ಹೆಚ್ಚು ಗಳಿಕೆ ಪಡೆದ ಹಿಂದಿ ಚಿತ್ರ ಎನಿಸಿದೆ ಎಂದು ತಿಳಿಸಿದೆ.

ಸಿನಿಮಾವನ್ನು ಅರ್ಜುನ್‌ ರೆಡ್ಡಿ ಖ್ಯಾತಿಯ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅನಿಲ್‌ ಕಪೂರ್‌, ರಶ್ಮಿಕಾ ಮಂದಣ್ಣ, ಬಾಬ್ಬಿ ಡಿಯೋಲ್‌ ಮತ್ತಿತರು ನಟಿಸಿದ್ದಾರೆ.

ಚಿತ್ರದಲ್ಲಿ ರಣಬೀರ್‌ ಕಪೂರ್‌ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅನಿಲ್‌ ಕಪೂರ್‌ ಅವರು ರಣಬೀರ್‌ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ತಂದೆ–ಮಗನ ಸಂಬಂಧ ಸೇರಿದಂತೆ ಅಪರಾಧದ ಕಥಾಹಂದರವನ್ನು ಚಿತ್ರ ಒಳಗೊಂಡಿದೆ.

ಅನಿಮಲ್‌ ಚಿತ್ರವನ್ನು ಭೂಷಣ್‌ ಕುಮಾರ್‌, ಕೃಷ್ಣ ಕುಮಾರ್‌ ಅವರ ಟಿ–ಸೀರೀಸ್‌, ಮುರಡ್‌ ಖೇತನ್‌ ಅವರ ಸಿನಿ ಒನ್‌ ಸ್ಟೋಡಿಯೊ ಮತ್ತು ಪ್ರಣಯ್‌ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್‌ ನಿರ್ಮಿಸಿದೆ. ಈ ಚಿತ್ರವು ಶುಕ್ರವಾರ (ಡಿಸೆಂಬರ್‌ 1) ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ತೆರೆಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT