ಮಂಗಳವಾರ, ಡಿಸೆಂಬರ್ 6, 2022
22 °C

ಹಳೆ ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವೆ: ರಶ್ಮಿಕಾ ಮಂದಣ್ಣ

ಪ್ರಜಾವಾಣಿ ವೆಬ್‌‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ತಮ್ಮ ಹಳೆಯ ಗೆಳೆಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಎದುರು ಸಿಕ್ಕರೆ ಚೆನ್ನಾಗಿಯೇ ಮಾತನಾಡಿಸುತ್ತೇನೆ ಎಂದು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತನ್ನ ಹಳೆ ಗೆಳೆಯರು ಒಂದೊಮ್ಮೆ ಅವರ ಈಗಿನ ಸ್ನೇಹಿತೆಯರೊಂದಿಗೆ ಸಿಕ್ಕರೂ, ಯಾವುದೇ ಮುಜುಗರವಿಲ್ಲದೆ ಭೇಟಿ ಮಾಡುತ್ತೇನೆ. ನನ್ನ ಮಾಜಿಗಳೊಂದಿಗೆ, ನಾನು ಇನ್ನೂ ಸ್ನೇಹ ಹೊಂದಿರುವೆ. ನಾನು ಅವರ ಕುಟುಂಬಗಳು, ಅವರ ಈಗಿನ ಗೆಳತಿಯರು, ಭವಿಷ್ಯದವರು ಎಲ್ಲರನ್ನೂ ಭೇಟಿಯಾಗಲು ಇಷ್ಟಪಡುತ್ತೇನೆ ಎಂದಿದ್ದಾರೆ.

ಹೀಗೆ ಮಾಡುವುದು ಉತ್ತಮ ಲಕ್ಷಣವಲ್ಲ ಎಂಬುದನ್ನು ಒಪ್ಪಿಕೊಂಡ ರಶ್ಮಿಕಾ, "ಆದರೆ ನಾನು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಆದ್ದರಿಂದ ಅವರೊಂದಿಗೆ ಹೀಗಿರುವುದು ಒಳ್ಳೆಯದು" ಎಂದು ತಿಳಿಸಿದ್ದಾರೆ.

ಕಿರಿಕ್‌ ಪಾರ್ಟಿಯಿಂದ ಜನಪ್ರಿಯವಾದ ರಶ್ಮಿಕಾ ಮಂದಣ್ಣ ಹೆಸರು ಆಗಾಗ ಕೆಲವು ನಟರೊಂದಿಗೆ ಕೇಳಿ ಬರುತ್ತಲೇ ಇರುತ್ತದೆ. ರಕ್ಷಿತ್‌ ಶೆಟ್ಟಿ ಜೊತೆಗಿನ ಬ್ರೇಕಪ್‌ ನಂತರ ರಶ್ಮಿಕಾ ಹೆಸರು ವಿಜಯ್‌ ದೇವರಕೊಂಡ ಜೊತೆಗೆ ಕೇಳಿಬಂದಿತ್ತು. ಇಬ್ಬರೂ ಜೋಡಿಯಾಗಿ ನಟಿಸಿದ ಗೀತಾಗೋವಿಂದಂ ಸೂಪರ್‌ ಹಿಟ್‌ ಆಗಿದ್ದು, ಬಳಿಕ ದೇವರಕೊಂಡ ಜೊತೆ ರಶ್ಮಿಕಾ ಹೆಚ್ಚಾಗಿ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣ.

ವಿಜಯ್‌ ಜೊತೆಗಿನ ರೂಮರ್‌ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ ‘ಇವೆಲ್ಲ ಕ್ಯೂಟ್‌ ಅಲ್ಲವೆ? ನಾನು ಅಯ್ಯೋ ಬಾಬು ರೀತಿ. ಎಲ್ಲವೂ ಕ್ಯೂಟ್‌. ನಾನು ಮತ್ತು ವಿಜಯ್‌ ಒಟ್ಟಿಗೆ ಇಂಡಸ್ಟ್ರಿಗೆ ಬಂದವರು. ಅವರ ಜೊತೆ ಸಾಕಷ್ಟು ಕೆಲಸ ಮಾಡಿದ್ದೇನೆ. ನಮ್ಮಿಬ್ಬರಿಗೂ ಇಂಡಸ್ಟ್ರಿ ಹೆಚ್ಚು ಗೊತ್ತಿಲ್ಲದಿದ್ದಾಗ ಇಬ್ಬರಿಗೂ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಸಮಾನ ಮನಸ್ಕರಾಗಿರುವುದರಿಂದ ಹೆಚ್ಚು ಸ್ನೇಹ ಬೆಳೆಯಿತು ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿಜಯ್‌ ದೇವರಕೊಂಡ ಅವರಿಂದಲೂ ರಶ್ಮಿಕಾ ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಪುಷ್ಪ ಚಿತ್ರದ ಬಳಿಕ ‘ಗುಡ್‌ಬೈ’ ಮೂಲಕ ಬಾಲಿವುಡ್‌ಗೆ ಕಾಲಿಡಲು ರಶ್ಮಿಕಾ ಸಜ್ಜಾಗಿದ್ದಾರೆ. ಅದರಲ್ಲಿ ಅವರು ಅವರ ಸಿನಿಮಾ ಶೀರ್ಷಿಕೆಯಿಂದ ಸ್ಫೂರ್ತಿ ಪಡೆದ ಒಂದು ಆಟವನ್ನು ಆಡಲಿದ್ದಾರಂತೆ.

ಅಮಿತಾಭ್‌ ಬಚ್ಚನ್‌, ನೀನಾ ಗುಪ್ತಾ, ಸುನಿಲ್‌ ಗ್ರೋವರ್‌ ಮತ್ತು ಗುಲಾಟಿ ಇರುವ ‘ಗುಡ್‌ಬೈ’ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅ.7ರಂದು ಚಿತ್ರ ತೆರೆಗೆ ಬರಲಿದೆ. ರಣಬೀರ್‌ ಕಪೂರ್‌ ಜೊತೆ ಒಂದು ಚಿತ್ರದಲ್ಲಿ ನಟಿಸಲಿದ್ದಾರೆ. ಜೊತೆಗೆ ಸಿದ್ದಾರ್ಥ್‌ ಮಲ್ಹೋತ್ರಗೂ ಚಿತ್ರವೊಂದರಲ್ಲಿ ರಶ್ಮಿಕಾ ಜೋಡಿಯಾಗಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.