ಭಾನುವಾರ, ನವೆಂಬರ್ 29, 2020
25 °C

‘ಕನ್ನಡಿಗ’ನತ್ತ ರವಿಚಂದ್ರನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರು ‘ಕನ್ನಡಿಗ’ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. 

ಇದು ಬಿ.ಎಂ. ಗಿರಿರಾಜ್‌ ಅವರು ನಿರ್ದೇಶಿಸುತ್ತಿರುವ ಚಿತ್ರ. ರವಿಚಂದ್ರನ್‌ ಹೇಳುವ ಪ್ರಕಾರ, ‘ನಾನು ಇದುವರೆಗೆ ಅಭಿನಯಿಸಿದ ಎಲ್ಲ ಚಿತ್ರಗಳಿಗಿಂತ ಇದು ತುಂಬಾ ಭಿನ್ನವಾಗಿರಲಿದೆ. ಈ ಪ್ರಕಾರದ ಸಿನಿಮಾ ನನಗೆ ತುಂಬಾ ಹೊಸತು. ಗಿರಿರಾಜ್‌ ಅವರು ಕಥೆ ಹೇಳಿದಾಗ ತುಂಬಾ ಹಿಡಿಸಿತುʼ ಎಂದರು.

ಈ ಚಿತ್ರಕ್ಕೆ ಚಿತ್ರಕಥೆ ಬರೆದವರೂ ಗಿರಿರಾಜ್‌ ಅವರೇ. 

ಚಿತ್ರದ ಕಥೆ ರೆವರೆಂಡ್‌ ಕಿಟ್ಟೆಲ್‌ ಅವರು ಇಂಗ್ಲಿಷ್‌ –ಕನ್ನಡ ಶಬ್ದಕೋಶ ಸಿದ್ಧಪಡಿಸುತ್ತಿದ್ದ  ಅವಧಿಯಲ್ಲಿ ನಡೆಯುವ ಘಟನೆಗಳ ಸುತ್ತ ಇದೆ. 

ಗಿರಿರಾಜ್‌ ಹೇಳುವಂತೆ, ‘ರವಿಚಂದ್ರನ್‌ ಅವರು ತಮ್ಮ ವೃತ್ತಿಬದುಕಿನ ಉತ್ತುಂಗಕ್ಕೆ ಏರಿದ್ದಾರೆ. ಹಾಗಾಗಿ ಹೊಸ ರಿಸ್ಕ್‌ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ಬಾಕ್ಸ್‌ ಆಫೀಸ್‌ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನನ್ನ ಈ ದೃಷ್ಟಿಕೋನ ಅವರಿಗೆ ಹಿಡಿಸಿದ ಕಾರಣ ಅವರು ನನ್ನ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ’ ಎಂದರು. 

ಕನ್ನಡಿಗ ಚಿತ್ರ ಶೀಘ್ರವೇ ಸೆಟ್ಟೇರಲಿದೆ. ಚಿತ್ರದಲ್ಲಿ ಜಾಮಿ ಆಲ್ಟರ್‌ (ದಿವಂಗತ ಟಾಮ್‌ ಆಲ್ಟರ್‌ ಅವರ ಪುತ್ರ) ಅವರು ಕಿಟ್ಟೆಲ್‌ ಪಾತ್ರ ನಿರ್ವಹಿಸಲಿದ್ದಾರೆ. ಅಂದಹಾಗೆ ರವಿಚಂದ್ರನ್‌ ಅವರ ರವಿ ಬೋಪಣ್ಣ ಚಿತ್ರವೂ ಶೀಘ್ರ ಬಿಡುಗಡೆಗೆ ಕಾಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು