ಬುಧವಾರ, ಮಾರ್ಚ್ 29, 2023
32 °C

ವಿಚ್ಛೇದನ ವದಂತಿ ನಡುವೆ ತಿಮ್ಮಪ್ಪನ ದರ್ಶನ ಮಾಡಿದ ನಟಿ ಸಮಂತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಹಾಗೂ ಪತಿ ನಾಗಚೈತನ್ಯ ನಡುವಿನ ವಿಚ್ಛೇದನ ವದಂತಿ ಮಧ್ಯೆಯೇ ಸಮಂತಾ ದೇವರ ಮೊರೆ ಹೋಗಿದ್ದಾರೆ.

ಇಂದು (ಸೆ. 18) ಸಮಂತಾ ದಿಢೀರ್ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಫೋಟೊ ಹಾಗೂ ವಿಡಿಯೊಗಳನ್ನು ತೆಗೆಯಬೇಡಿ ಎಂದು ಮಾಧ್ಯಮದವರ ವಿರುದ್ಧ ಸಿಡುಕಿದ್ದಾರೆ.

ಮಾಧ್ಯಮ ಮಂದಿ ಫೋಟೊ ತೆಗೆಯಲು ಮುಂದಾದಾಗ  ‘ನಿಮಗೆ ಬುದ್ದಿ ಇದೆಯಾ?’ ಎಂದು ಸಿಡುಕುವ ಮೂಲಕ ತೆರಳಿದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಕೆಲವರು ದೇವಾಲಯದ ಆವರಣದಲ್ಲಿನ ಸಮಂತಾ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. 

ಸದ್ಯ ಸಮಂತಾ ಮತ್ತು ನಾಗಚೈತನ್ಯ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಸಮಂತಾ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆಯಲು ಸುಮಾರು ₹ 250 ಕೋಟಿ ಜೀವನಾಂಶ ಬೇಡಿಕೆ ಇಟ್ಟಿದ್ದಾರೆ ಎಂದು ಟಾಲಿವುಡ್‌ನ ಬಲ್ಲ ಮೂಲಗಳ ತಿಳಿಸಿವೆ. 

ಇಲ್ಲಿಯವರೆಗೂ ನಾಗಚೈತನ್ಯ ಕುಟುಂಬದವರು ಹಾಗೂ ಸಮಂತಾ ಅವರಾಗಲಿ ವಿಚ್ಛೇದನದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು