ಗುರುವಾರ, 13 ನವೆಂಬರ್ 2025
×
ADVERTISEMENT
ADVERTISEMENT

ಸಪ್ತಮಿ ಗೌಡ ದುಬೈ ಡೈರೀಸ್: ಹತ್ತು ವರ್ಷದ ಕನಸು ನನಸು ಮಾಡಿಕೊಂಡ ಕಾಂತಾರ ಬೆಡಗಿ

Published : 13 ನವೆಂಬರ್ 2025, 6:56 IST
Last Updated : 13 ನವೆಂಬರ್ 2025, 6:56 IST
ಫಾಲೋ ಮಾಡಿ
Comments
ನಟಿ ಸಪ್ತಮಿ ಗೌಡ ಅವರು ಡಾಲಿ ಧನಂಜಯ್ ಅಭಿನಯದ ‘ಪಾಪ್​​ಕಾರ್ನ್ ಮಂಕಿ ಟೈಗರ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.

ಚಿತ್ರ: ಇನ್‌ಸ್ಟಾಗ್ರಾಮ್

ADVERTISEMENT
ಬಳಿಕ ರಿಷಬ್ ಶೆಟ್ಟಿ, ನಟಿಸಿ ನಿರ್ದೇಶಿಸಿದ ಕಾಂತಾರ ಚಿತ್ರದಲ್ಲಿ ನಟಿ ಸಪ್ತಮಿ ಗೌಡ ಅವರು ಲೀಲಾ ಪಾತ್ರದಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದುಕೊಂಡರು. ಈ ಸಿನಿಮಾ ನಟಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು.

ಸದ್ಯ ನಟಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಸಪ್ತಮಿ ಗೌಡ ದೇಶ, ವಿದೇಶ ಸುತ್ತುತ್ತಲೇ ಇರುತ್ತಾರೆ. ಸ್ವಿಜರ್ಲೆಂಡ್, ದುಬೈ ಪ್ರವಾಸ ಕೈಗೊಳ್ಳುತ್ತಲೇ ಇರುತ್ತಾರೆ. ಸ್ವಿಜರ್ಲೆಂಡ್, ದುಬೈ ಸುತ್ತಾಡಿದ ಫೋಟೊಗಳನ್ನು ನಟಿ ಸಪ್ತಮಿ ಗೌಡ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಈಗ ದುಬೈ ಡೈರೀಸ್‌ ಬಗ್ಗೆ ನಟಿ ಸಪ್ತಮಿ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಸುಮಾರು ಹತ್ತು ವರ್ಷಗಳ ನಂತರ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ಫೋಟೊಗಳನ್ನು ಹಂಚಿಕೊಂಡ ನಟಿ ಸಪ್ತಮಿ ಗೌಡ ಅದರ ಜೊತೆಗೆ ‘ದುಬೈ ಡೈರೀಸ್.. ನಾನು 2015ರಲ್ಲಿ ನನ್ನ ಕುಟುಂಬದೊಂದಿಗೆ ಮೊದಲ ಬಾರಿಗೆ ದುಬೈಗೆ ಹೋದಾಗ ಅವರು ನಮ್ಮನ್ನು ಅಟ್ಲಾಂಟಿಸ್‌ನಲ್ಲಿರುವ ಅಕ್ವಾವೆಂಚರ್ ಪಾರ್ಕ್‌ಗೆ ಕರೆದೊಯ್ದರು. ನಾನು ಡಾಲ್ಫಿನ್‌ಗಳನ್ನು ಭೇಟಿ ಮಾಡಿ ಅವುಗಳ ಜೊತೆ ಈಜಬೇಕೆಂದು ಬಯಸಿದ್ದೆ. ಆದರೆ ಅದು ಆಗಲಿಲ್ಲ. ನಾನು ಒಂದು ದಿನ ಅದನ್ನು ಮಾಡುತ್ತೇನೆ ಎಂದು ನನಗೆ ನಾನೇ ಭರವಸೆ ತಂದುಕೊಂಡೆ. ಸುಮಾರು ಹತ್ತು ವರ್ಷಗಳ ನಂತರ, ನಾನು ಅದನ್ನು ನನಗಾಗಿ ಮಾಡಿಕೊಂಡೆ’ ಎಂದರು.

‘ಹತ್ತು ವರ್ಷಗಳ ಹಿಂದೆ ನಾನು ಇದ್ದ ಮಗುವಿನಂತೆ ಭಾವಿಸಿದೆ. ಮತ್ತು ಅದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿತ್ತು. ಎಲ್ಲದಕ್ಕೂ ದೇವರಿಗೆ ಧನ್ಯವಾದಗಳು. ನಾನು ಆನಂದಿಸುವ ನನ್ನ ಹದಿಹರೆಯದ ಸಾಹಸಗಳಾಗಿದ್ದವು. ವೇಕ್‌ಬೋರ್ಡ್‌ನಿಂದ ಬಿದ್ದಾಗ ನನ್ನ ಗುಲಾಬಿ, ಕಂದು ಮತ್ತು ಕೆಂಪು ಬಣ್ಣಕ್ಕೆ ತಿರುಗಿದ ಮುಖವನ್ನು ಚಿತ್ರ 7ರಲ್ಲಿ ನೋಡಲು ತಪ್ಪಿಸಿಕೊಳ್ಳಬೇಡಿ. ತುಂಬಾ ಕೃತಜ್ಞಳಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT