ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿ ಪಯಣಕ್ಕೆ 28 ವರ್ಷ: ವಿಶೇಷ ಪೋಸ್ಟ್‌ ಹಂಚಿಕೊಂಡ ಕಿಚ್ಚ ಸುದೀಪ್‌

Published 31 ಜನವರಿ 2024, 12:46 IST
Last Updated 31 ಜನವರಿ 2024, 12:46 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ನಟರ ಪಟ್ಟಿಗೆ ಸುದೀಪ್ ಅವರ ಹೆಸರೂ ಸೇರುತ್ತದೆ. ಸುದೀಪ್‌ ಅವರು ಚಿತ್ರರಂಗ ಪ್ರವೇಶಿಸಿ 28 ವರ್ಷಗಳು ಸಂದಿವೆ. ಈ ಹಿನ್ನಲೆ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ವಿಶೇಷವಾಗಿ ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ.

ಕೆಲವು ವರ್ಷಗಳ ಹಿಂದೆ ನಾನು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್‌ ಅವರೊಂದಿಗೆ ಬ್ರಹ್ಮ ಚಿತ್ರಕ್ಕಾಗಿ ಕ್ಯಾಮೆರಾವನ್ನು ಎದುರಿಸಲು  ವೇದಿಕೆ ಹತ್ತಿದ್ದೆ. ಈಗಾಗಲೇ 28 ವರ್ಷಗಳು ಕಳೆದಿದೆ. ಈ ಅಮೂಲ್ಯ ಉಡುಗೊರೆಗಾಗಿ ನಾನು ಪ್ರತಿಯೊಬ್ಬರಿಗೂ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 

ವಿವರವಾದ ಪತ್ರವೊಂದನ್ನೂ ಬರೆದ ಸುದೀಪ್‌, ಇದೊಂದು ರೀತಿಯ ರೋಲರ್‌ ಕೋಸ್ಟರ್‌ ಪಯಣದಂತಿದೆ, ಅದರ ಪ್ರತಿಯೊಂದು ಕ್ಷಣವನ್ನೂ ನಾನು ಅನುಭವಿಸಿದ್ದೇನೆ. ನನ್ನೊಂದಿಗಿರುವ ಎಲ್ಲರಿಗೂ ಹಾಗೂ ನಾನು ನಾನಾಗಿರುವುದನ್ನು ಒಪ್ಪಿಕೊಂಡಿರುವುದಕ್ಕೆ ಧನ್ಯವಾದ ಎಂದೂ ಬರೆದುಕೊಂಡಿದ್ದಾರೆ.

ಸುದೀಪ್‌ ಅವರು ಬಿಗ್‌ಬಾಸ್‌ನ 10 ಸೀಸನ್‌ಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಮೂಲಕ ನಟ ಮಾತ್ರವಲ್ಲದೆ ನಿರೂಪಕನಾಗಿಯೂ ಕನ್ನಡಿಗರ ಮನೆ –ಮನಗಳಲ್ಲಿ ಹೆಸರು ಮಾಡಿದ್ದಾರೆ.

ಕಲರ್ಸ್‌ ಕನ್ನಡ ಕೂಡ ಕಿಚ್ಚ ಸುದೀಪ್‌ ಅವರಿಗೆ ಬಿಗ್‌ ಬಾಸ್‌ ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿ ವಿಡಿಯೊ ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT