ಸ್ಯಾಂಡಲ್ವುಡ್ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ನೇರ ಮಾತುಗಾರಿಕೆಯಿಂದ ಎಲ್ಲರ ಗಮನ ಸೆಳೆಯುತ್ತಾರೆ. ಈ ಹಿಂದೆ ನಟಿ ಮಾಳವಿಕಾ ಅವಿನಾಶ್ ನಟನೆಯ ‘ಕೆಜಿಎಫ್’ ಚಿತ್ರದಲ್ಲಿ ಹೇಳಿದ್ದ ಡೈಲಾಗ್ ಅನ್ನು ಜನರು ಇನ್ನೂ ಮರೆತ್ತಿಲ್ಲ.
.’ಸುಧಾಮೂರ್ತಿ ಸಮಾಜಮುಖಿ ಕಾರ್ಯ ಶ್ಲಾಘನೀಯ‘.
ಇನ್ನು, ನಟಿ ಮಾಳವಿಕ ಅವಿನಾಶ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಸಕ್ರಿಯರಾಗಿದ್ದಾರೆ. ಹೊಸ ಹೊಸ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಾ ಇರುತ್ತಾರೆ. ಈಗ ನಟಿ ಮಾಳವಿಕ ಅವಿನಾಶ್ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನಟಿ ಹಂಚಿಕೊಂಡ ಪೋಸ್ಟ್ನಲ್ಲಿ ಲೇಖಕಿ ಸುಧಾಮೂರ್ತಿ ಅವರು ಇದ್ದಾರೆ.

ನಟಿ ಮಾಳವಿಕ ಅವಿನಾಶ್ ಪೋಸ್ಟ್ನಲ್ಲಿ ಏನಿದೆ?

ನಟಿ ಮಾಳವಿಕ ಅವಿನಾಶ್ಗೆ ಸುಧಾಮೂರ್ತಿ ಅವರು ಇಳಕಲ್ನ ಸೀರೆ ಹಾಗೂ ಅದಕ್ಕೆ ಹೋಲುವಂತ ಬ್ಲೌಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುಧಾಮೂರ್ತಿ ಅವರು ಸೀರೆಯನ್ನು ಗಿಫ್ಟ್ ಆಗಿ ಕೊಟ್ಟ ಬಗ್ಗೆ ನಟಿ ಮಾಳವಿಕ ಅವಿನಾಶ್ ಹೀಗೆ ಬರೆದುಕೊಂಡಿದ್ದಾರೆ.

‘ಕೆಲವೊಮ್ಮೆ ಸೀರೆಗಿಂತ ಕೊಟ್ಟವರು ಮುಖ್ಯವಾಗುತ್ತಾರೆ. ಶ್ರೀಮತಿ ಸುಧಾಮೂರ್ತಿ ಅವರು ಏಕೆ ನಮ್ಮ ಮನೆಗೆ ಬಂದು ಅಷ್ಟು ಪ್ರೀತಿಯಿಂದ ಸೀರೆ ಕೊಟ್ಟರು? ಗೃಹಭಂಗದಲ್ಲಿ ನನ್ನ ನಂಜಿಯ ಪಾತ್ರ ನೋಡಿ ಮೆಚ್ಚಿಕೊಂಡು ನನಗೆ ಸೀರೆಯನ್ನು ಕೊಟ್ಟರು. ಹೃದಯ ಪೂರ್ತಿಯಾದ ಪ್ರಶಂಸೆಗಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ. ಇದು ನನ್ನ ನಟನೆಗೆ ಬಂದ ರಾಷ್ಟ್ರೀಯ ಪ್ರಶಸ್ತಿ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.