ಗುರುವಾರ , ಜೂನ್ 17, 2021
22 °C

ತಮಿಳು ನಟ ಚೆಲ್ಲಾದುರೈ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ಪೋಷಕ ನಟ ಆರ್‌.ಎಸ್‌.ಜಿ. ಚೆಲ್ಲಾದುರೈ(84) ಹೃದಯಾಘಾತದಿಂದ ನಿಧನರಾದರು.

‘ಶಿವಾಜಿ’, ‘ತೇರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ನಟನೆ ಸಾಕಷ್ಟು ಗಮನ ಸೆಳೆದಿತ್ತು. ತೇರಿ ಚಿತ್ರದಲ್ಲಿ ಮಗಳನ್ನು ಹುಡುಕುವ ತಂದೆಯ ಭಾವನಾತ್ಮಕ ಪಾತ್ರದಲ್ಲಿಯೂ ಅವರು ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ‘ಮಾರಿ’ ಚಿತ್ರದಲ್ಲಿ ಅವರ ಪಾತ್ರದ ಸನ್ನಿವೇಶ ಮೀಮ್‌ಗಳಲ್ಲಿ ಹೆಚ್ಚು ಬಳಕೆಯಾಗುತ್ತಿತ್ತು.

ಖ್ಯಾತ ನಿರ್ದೇಶಕ ಕೆ.ವಿ. ಆನಂದ್‌ ಅವರೂ ಕೂಡಾ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಖ್ಯಾತ ಹಾಸ್ಯನಟ ವಿವೇಕ್‌ ನಿಧನರಾಗಿದ್ದರು. ಹೀಗೆ ಸಾಲು ಸಾಲು ಚಿತ್ರರಂಗದ ಪ್ರಮುಖರ ಅಗಲಿಕೆ ಕಾಲಿವುಡ್‌ನಲ್ಲಿ ಶೋಕ ಉಂಟು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು