ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರದ ‘ಒಂದೇ ಒಂದು ಸಲ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ಡಿ.12ರಂದು ತೆರೆಗೆ ಬರಲಿದೆ.

ಗೀತೆಗೆ ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಧ್ವನಿಯಾಗಿದ್ದಾರೆ. ಬ್ಯಾಂಕಾಕ್ನ ಸಮುದ್ರ ತೀರದಂಚಿನಲ್ಲಿ ನಡೆಯುವ ಪ್ರೀತಿ ಸನ್ನಿವೇಶಗಳನ್ನು ಹೊಂದಿರುವ ಈ ಹಾಡಿನಲ್ಲಿ ದರ್ಶನ್ ಹಾಗೂ ರಚನ ರೈ ಹೆಜ್ಜೆ ಹಾಕಿದ್ದಾರೆ.

ಮಾಸ್ ಆ್ಯಕ್ಷನ್ ಕಥೆ ಹೊಂದಿರುವ ಚಿತ್ರವನ್ನು ಜೈಮಾತಾ ಕಂಬೈನ್ಸ್ ಅಡಿಯಲ್ಲಿ ಪ್ರಕಾಶ್ ವೀರ್ ನಿರ್ಮಿಸಿದ್ದಾರೆ. ತುಳಸಿ, ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸುಧಾಕರ್ ಎಸ್.ರಾಜ್ ಛಾಯಾಚಿತ್ರಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.