ಬಹುತೇಕ ಹೊಸಬರಿಂದಲೇ ಕೂಡಿರುವ ‘ವಿಧಿ’ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಮಲಿಯಣ್ಣ ಹೆಚ್. ನಿರ್ದೇಶನದ ಚಿತ್ರವಿದು. ಅನಸೂಯಮ್ಮ ಮತ್ತು ಟಿ. ಆನಂದ ಬಂಡವಾಳ ಹೂಡಿದ್ದಾರೆ.

‘ಪ್ರಸಕ್ತ ಯುವಜನಾಂಗಕ್ಕೆ ಅನ್ವಯವಾಗುವಂಥ ಸಿನಿಮಾ ಇದಾಗಿದೆ. ಬದುಕಲ್ಲಿ ನಾವು ಅಂದುಕೊಂಡಂತೆ ಆಗುವುದಿಲ್ಲ. ಬೇರೆಯದೆ ಆಗುತ್ತದೆ. ಅದನ್ನೇ ವಿಧಿ ಎನ್ನುವುದು. ಸಿನಿಮಾದಲ್ಲಿ ಎರಡು ವಿಶೇಷತೆಗಳಿವೆ. ಒಂದು ನಾಯಕ ಹಾಗೂ ಖಳನಾಯಕ ಚಿತ್ರದಲ್ಲಿ ಎಲ್ಲಿಯೂ ನೇರವಾಗಿ ಭೇಟಿಯಾಗುವುದಿಲ್ಲ. ಇನ್ನೊಂದು ಕ್ಲೈಮಾಕ್ಸ್ನಲ್ಲಿ ಇಪ್ಪತ್ತು ನಿಮಿಷಗಳ ಯಾವ ಸಂಭಾಷಣೆಯೂ ಇರುವುದಿಲ್ಲ’ ಎಂದರು ನಿರ್ದೇಶಕ.

ಅರುಣ್ಕುಮಾರ್ ನಾಯಕ. ಶಕುಂತಲಾ ನಾಯಕಿ. ಬಲ ರಾಜವಾಡಿ, ಕೇಶವಮೂರ್ತಿ, ಚಂದ್ರಶೇಖರ್ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ವಿ.ಮನೋಹರ್ ಸಾಹಿತ್ಯ, ಸಂಗೀತವಿದೆ. ಸೂರ್ಯೋದಯ ಅವರ ಛಾಯಾಚಿತ್ರಗ್ರಹಣ, ಅಭಿಷೇಕ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.