ಬೆಂಗಳೂರು: ವಯಾಕಾಂ 18 ಮತ್ತು ಸ್ಟಾರ್ ಇಂಡಿಯಾ ವಿಲೀನದ ಜಂಟಿ ಸಹಯೋಗದಲ್ಲಿ ರೂಪುಗೊಂಡಿರುವ ಜಿಯೊಸ್ಟಾರ್ ಇದೀಗ ಜಿಯೊ ಹಾಟ್ಸ್ಟಾರ್ (JioHotstar) ಅಧಿಕೃತವಾಗಿ ಅನಾವರಣಗೊಳಿಸಿದೆ.

ದೇಶದ ಆನ್ಲೈನ್ ಸ್ಟ್ರೀಮಿಂಗ್ ವೇದಿಕೆಯಲ್ಲಿ ಜಿಯೊ ಹಾಟ್ಸ್ಟಾರ್ ಅನಂತ ಸಾಧ್ಯತೆಗಳನ್ನು ಅನಾವರಣಗೊಳಿಸಲಿದೆ. ಈ ಸಂದರ್ಭದಲ್ಲಿ ಹೊಸ ಲೊಗೊ ಸಹ ಬಿಡುಗಡೆ ಮಾಡಲಾಗಿದೆ.

ಜಿಯೊಸಿನಿಮಾ ಮತ್ತು ಡಿಸ್ನಿ+ ಹಾಟ್ ಸ್ಟಾರ್ ಮನರಂಜನೆ ಮತ್ತು ಕ್ರೀಡಾ ಸ್ಟ್ರೀಮಿಂಗ್ ಅನುಭವವನ್ನು ಮರು ವ್ಯಾಖ್ಯಾನಿಸಲು ಒಟ್ಟಿಗೆ ಸೇರಿವೆ ಎಂದು ಕಂಪನಿ ತಿಳಿಸಿದೆ.

ಈ ಬ್ರ್ಯಾಂಡ್ಗಳ ಒಗ್ಗೂಡುವಿಕೆ ಮೂಲಕ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. 3 ಲಕ್ಷ ಗಂಟೆಗಳ ಮನರಂಜನೆ, ಲೈವ್ ಸ್ಪೋರ್ಟ್ಸ್ ಪ್ರಸಾರ ಮತ್ತು 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೊ ಹಾಟ್ಸ್ಟಾರ್ ಮನರಂಜನೆಯನ್ನು ಮರು ವ್ಯಾಖ್ಯಾನಿಸಲಿದೆ ಎಂದು ಹೇಳಿದೆ.

ಜಿಯೊ ಹಾಟ್ಸ್ಟಾರ್ ಚಂದಾದಾರಿಕೆ ಸೇವೆಯು ₹149ಕ್ಕೆ (ಮೂರು ತಿಂಗಳಿಗೆ) ಆರಂಭವಾಗಲಿದೆ. ವೀಕ್ಷಕರ ಅಗತ್ಯಗಳಿಗೆ ರೂಪಿಸಲಾದ ಪ್ಲ್ಯಾನ್ಗಳು ವಿವಿಧ ಅಗತ್ಯಗಳಿಗೆ ತಕ್ಕಂತೆ ಮೂರು ಮೊಬೈಲ್ ಯೋಜನೆಗಳು ಲಭ್ಯವಿದೆ.

ಮೊಬೈಲ್ ಪ್ಲ್ಯಾನ್ನಲ್ಲಿ, ಒಂದು ಮೊಬೈಲ್ ಪ್ಲಾನ್ ಮೂರು ತಿಂಗಳಿಗೆ ₹149 ಅಥವಾ ವಾರ್ಷಿಕವಾಗಿ ₹499 ಪಾವತಿಸಬಹುದು. ಸೂಪರ್ ಪ್ಲ್ಯಾನ್ ಮೊಬೈಲ್, ವೆಬ್ ಮತ್ತು ಬೆಂಬಲಿತ ಲಿವಿಂಗ್ ರೂಮ್ ಪ್ಲಾಟ್ಫಾರ್ಮ್ಗಳಲ್ಲಿ ಎರಡು ಸಾಧನಗಳಲ್ಲಿ ಪ್ಲ್ಯಾನ್ ಒದಗಿಸುತ್ತದೆ. ಇದರ ಬೆಲೆ ಮೂರು ತಿಂಗಳಿಗೆ ₹299 ಮತ್ತು ವಾರ್ಷಿಕವಾಗಿ ₹899 ಆಗಿದೆ.

ಪ್ರೀಮಿಯಂ ಪ್ಲ್ಯಾನ್ ನಾಲ್ಕು ಸಾಧನಗಳವರೆಗೆ ಜಾಹೀರಾತು-ಮುಕ್ತ ವೀಕ್ಷಣೆಯನ್ನು (ಲೈವ್ ಕ್ರೀಡೆ ಮತ್ತು ಈವೆಂಟ್ಗಳನ್ನು ಹೊರತುಪಡಿಸಿ) ಅನುಮತಿಸುತ್ತದೆ. ಇದರ ಬೆಲೆ ಮೂರು ತಿಂಗಳಿಗೆ ₹499 ಅಥವಾ ವಾರ್ಷಿಕವಾಗಿ ₹1,499 ಆಗಿದೆ.
.JIO AIRFIBER: ಜಿಯೋ ಏರ್ ಫೈಬರ್ ಘೋಷಣೆ: ಶುಲ್ಕ ಎಷ್ಟು ತಿಳಿದುಕೊಳ್ಳಿ.ಡಿಸ್ನಿ+ಹಾಟ್ಸ್ಟಾರ್–ಜಿಯೊ ಸಿನಿಮಾ ವಿಲೀನ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.