ಶನಿವಾರ, ಸೆಪ್ಟೆಂಬರ್ 25, 2021
24 °C

ಬಾಲಿವುಡ್ ನಟಿ ನಿಖಿತಾ ರಾವಲ್‌ಗೆ ಗನ್ ತೋರಿಸಿ ₹7ಲಕ್ಷ ದೋಚಿದ ದರೋಡೆಕೋರರು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್ ನಟಿ ನಿಖಿತಾ ರಾವಲ್ ಅವರು ದರೋಡೆಗೆ ಒಳಗಾಗಿದ್ದಾರೆ. ಕಳೆದ ವಾರ ದೆಹಲಿಯ ತಮ್ಮ ಚಿಕ್ಕಮ್ಮನ ಮನೆಗೆ ಹೋಗುವಾಗ ನಿಖಿತಾ ಅವರನ್ನು ಅಡ್ಡಗಟ್ಟಿದ್ದ ದರೋಡೆಕೋರರು ಗನ್ ತೋರಿಸಿ ಅವರಿಂದ 7 ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ.

ಪೊಲೀಸ್ ಬಳಿ ದೂರು ದಾಖಲಿಸಿದ ಬಳಿಕ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿರುವ ನಿಖಿತಾ, ‘ಶೋ ಒಂದರ ಶೂಟಿಂಗ್‌ಗಾಗಿ ಮುಂಬೈನಿಂದ ದೆಹಲಿಗೆ ಬಂದಿದ್ದೆ. ಶಾಸ್ತ್ರೀನಗರದಲ್ಲಿ ನನ್ನ ಚಿಕ್ಕಮ್ಮನ ಬಳಿ ಇದ್ದೆ. ಭಾನುವಾರ  ಶಾಪಿಂಗ್ ಮುಗಿಸಿಕೊಂಡು ಬರುವಾಗ ದರೋಡೆಕೋರರು ಗನ್ ತೋರಿಸಿ ನನ್ನ ಕಾರ್ ಅಡ್ಡಗಟ್ಟಿದ್ದರು. ಬಳಿಕ ನನ್ನನ್ನು ಒತ್ತೆಯಾಳಾಗಿಟ್ಟುಕೊಂಡು, ಬೆದರಿಸಿ 7 ಲಕ್ಷ ರೂಪಾಯಿ ದೋಚಿದ್ದಾರೆ‘ ಎಂದು ಆರೋಪಿಸಿದ್ದಾರೆ.

‘ಇದೊಂದು ನನ್ನ ಜೀವನದಲ್ಲಿ ನಡೆದ ಅತಿ ದೊಡ್ಡ ಆಘಾತಕಾರಿ ಘಟನೆ. ನಾನು ಬದುಕಿದ್ದೇನೆ ಎಂದು ಕೂಡ ನನಗೆ ನಂಬಲೂ ಆಗುತ್ತಿಲ್ಲ. ಇದರಿಂದ ನನಗೆ ಹೊರ ಬರಲು ಆಗುತ್ತಿಲ್ಲ‘ ಎಂದು ತಿಳಿಸಿರುವ ನಿಖಿತಾ, ಈ ಕುರಿತು ದೆಹಲಿಯ ಶಾಸ್ತ್ರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿಖಿತಾ ಅವರು ಅನಿಲ್ ಕಪೂರ್ ಜೊತೆ ‘ಬ್ಲ್ಯಾಕ್ ಆ್ಯಂಡ್ ವೈಟ್‘ ಸಿನಿಮಾದಲ್ಲಿ ನಟಿಸಿದ್ದರು. ‘ಮಿಸ್ಟರ್ ಹಾಟ್ ಆ್ಯಂಡ್ ಮಿಸ್ಟರ್ ಕೂಲ್‘, ‘ದಿ ಹಿರೋ ಅಭಿಮನ್ಯು‘, ‘ಅಮ್ಮಾ ಕಿ ಬೋಲಿ‘ ಸಿನಿಮಾದಲ್ಲೂ ಕೂಡ ಅಭಿನಯಿಸಿದ್ದರು. ಇತ್ತೀಚೆಗೆ ರಾಜ್‌ ಕುಂದ್ರಾ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪರವಾಗಿ ಮಾತನಾಡಿ ಸುದ್ದಿಯಾಗಿದ್ದರು.

ಇದನ್ನೂ ಓದಿ: ಈ 13 ಅತ್ಯಂತ ಭಯಾನಕ ಸಿನಿಮಾಗಳನ್ನು ನೋಡಿದವರಿಗೆ ಸಿಗುತ್ತೆ ಭಾರಿ ಬಹುಮಾನ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು