ಬುಧವಾರ, ಸೆಪ್ಟೆಂಬರ್ 22, 2021
21 °C

ಗಣೇಶ ಹಬ್ಬಕ್ಕೆ ಜೊತೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್: ಅಭಿಮಾನಿಗಳು ಫುಲ್ ಖುಷ್!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಸ್ಪರ್ಧಿಗಳ ಪೈಕಿ ದಿವ್ಯಾ ಸುರೇಶ್ ಕೂಡ ಒಬ್ಬರು. ಬಿಗ್‌ ಬಾಸ್ ವಿನ್ನರ್ ಮಂಜು ಪಾವಗಡ ಜೊತೆಗೆ ಆತ್ಮೀಯವಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಮಹಿಳಾ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಒಳ್ಳೆಯ ಸ್ನೇಹಿತರೆಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ಬಳಿಕವು ಜೊತೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಇಬ್ಬರೂ ಒಟ್ಟಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.

ದಿವ್ಯಾ ಸುರೇಶ್ ಅವರಷ್ಟೇ ಅಲ್ಲದೆ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸ್ಪರ್ಧಿಯಾಗಿದ್ದ ನಟಿ ಶುಭಾ ಪೂಂಜ ಕೂಡ ಪಾಲ್ಗೊಂಡಿದ್ದಾರೆ. ಈ ಕುರಿತು ಫೋಟೊಗಳನ್ನು ಮಂಜು ಪಾವಗಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶುಭಾ ಪೂಂಜ ಅವರ ಭಾವಿ ಪತಿ ಸುಮಂತ್ ಮಹಾಬಲ ಅವರು ಕೂಡ ಗಣೇಶ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಕುರಿತು ಅವರು ಕೂಡ ಫೋಟೊಗಳನ್ನು ಹಂಚಿಕೊಂಡಿದ್ದು, 'ಗಣೇಶ ಹಬ್ಬ... ದಿವ್ಯ ಸುರೇಶ್ ಮತ್ತು ಎಲ್ಲರ ಮೆಚ್ಚಿನ ಮಂಜು ಪಾವಗಡ ಅದ್ಭುತವಾದ ಭೋಜನ ಕೂಟ ಆಯೋಜಿಸಿದ್ದಕ್ಕೆ ಧನ್ಯವಾದಗಳು' ಎಂದಿದ್ದಾರೆ.

ಈ ಫೋಟೊಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಜೋಡಿ ತುಂಬಾ ಚೆನ್ನಾಗಿದೆ. ಇಬ್ಬರೂ ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ.

'ಕ್ಷಮೆ' ಕೇಳಿದ್ದ ದಿವ್ಯಾ ಸುರೇಶ್

ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದ ಕೊನೆಯ ವಾರದಲ್ಲಿ ಮಂಜು ಪಾವಗಡಗೆ ದಿವ್ಯಾ ಸುರೇಶ್ ಕ್ಷಮೆ ಕೇಳಿದ್ದರು. ಫಸ್ಟ್ ಇನ್ನಿಂಗ್ಸ್‌ನಲ್ಲಿ ತಮ್ಮಿಂದಾಗಿ ಮಂಜು ಪಾವಗಡ ಆಟಕ್ಕೆ ಹಿನ್ನಡೆಯಾಯ್ತು ಎಂಬ ಕಾರಣಕ್ಕೆ ದಿವ್ಯಾ ಸುರೇಶ್ ಕ್ಷಮೆ ಕೋರಿದ್ದರು. ಬಿಗ್ ಬಾಸ್ ನೀಡಿದ್ದ ವಿಶೇಷ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮಂಜು ಪಾವಗಡಗೆ ಸರ್‌ಪ್ರೈಸ್ ನೀಡಿ ದಿವ್ಯಾ ಸುರೇಶ್ 'ಸಾರಿ' ಎಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು