ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ತಮ್ಮ ಇಸ್ಟಾಗ್ರಾಮ್ ಖಾತೆಯಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ವಿಡಿಯೊ ತುಣುಕೊಂದನ್ನು ಪೋಸ್ಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಪೋಸ್ಟ್ ಎರಡು ಕಾರಣಗಳಿಂದಾಗಿ ನೆಟ್ಟಿಗರ ಮನಸೂರೆಗೊಂಡಿದೆ.

ಮೊದಲ ಕಾರಣ, ಶಿಲ್ಪ ಶೆಟ್ಟಿಯವರ ಮಗಳು ಸಮಿಷಾಳ ಚಂದದ ಚಿತ್ರ ಮೊಟ್ಟಮೊದಲ ಸಾರಿ ನೋಡಲು ಸಿಗುತ್ತದೆ. ಎರಡನೆಯದಾಗಿ, ಶಿಲ್ಪಾ ಶೆಟ್ಟಿ ಪುತ್ರ ವಯಾನ್ ರಾಜ್ ಕುಂದ್ರಾ ಕೈಯಾರೆ ಬರೆದಿರುವ ಪತ್ರದ ಚಿತ್ರ ಪೋಸ್ಟ್‌ನಲ್ಲಿ ಕಾಣಸಿಗುತ್ತದೆ.

ಗುಲಾಬಿ ಬಣ್ಣದ ಪ್ರಾಕ್ ಧರಿಸಿರುವ ಮಗಳು ಸಮಿಷಾಳನ್ನು ಎತ್ತಿ ಹಿಡಿದು ಮುದ್ದು ಮಾಡುತ್ತಿರುವ ಶಿಲ್ಪಾ ಶೆಟ್ಟಿ, ತನ್ನ ತಂಗಿಯನ್ನು ಅಕ್ಕರೆಯಿಂದ ನೋಡುತ್ತಿರುವ ವಯಾನ್ ರಾಜ್ ಕುಂದ್ರಾ ಅವರ ಚಿತ್ರವು ನೆಟ್ಟಿಗರನ್ನು ಸೆಳೆದಿದೆ.

ವಿಡಿಯೊದಲ್ಲಿರುವ ಎರಡನೇ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಮಗ ವಯಾನ್ ರಾಜ್ ಕುಂದ್ರಾ ತನ್ನ ತಾಯಿಗೆ ಧನ್ಯವಾದ ತಿಳಿಸುತ್ತಾ ಪತ್ರವೊಂದನ್ನು ಬರೆದಿದ್ದಾನೆ. 'ನೀನು ನನಗೆ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದ. ನೀನು ನನಗೆ ಸ್ಪೂರ್ತಿ ಆಗಿದ್ದೀಯ. ನನಗಾಗಿ ನೀನು ರುಚಿಕರವಾದ ಅಡುಗೆ ಮಾಡುತ್ತೀಯ. ಅದಕ್ಕಾಗಿ ಧನ್ಯವಾದ' ಎಂದಿದ್ದಾನೆ.

ಲೇಖಕಿ ಎಲಿಜಬೆತ್ ಸ್ಟೋನ್ ಅವರ ನುಡಿಯನ್ನು ಉಲ್ಲೇಖಿಸಿರುವ ಶಿಲ್ಪಾ ಶೆಟ್ಟಿ, 'ನನ್ನ ಹೃದಯದ ಎರಡು ತುಂಡುಗಳಾದ ವಯಾನ್ ಮತ್ತು ಸಮಿಶಾ, ನೀವಿಬ್ಬರೂ ನನ್ನನ್ನು ಪೂರ್ಣಗೊಳಿಸಿದ್ದೀರಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ತಾಯಂದಿರ ದಿನದ ಶುಭಾಶಯಗಳು. ನನಗೆ ಮತ್ತು ಎಲ್ಲ ಅದ್ಭುತ ತಾಯಂದಿರಿಗೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.