ಬೆಂಗಳೂರು: ಬಾಲಿವುಡ್ ನಟಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಜೋಡಿ ಬೇರೆ ಬೇರೆಯಾಗುತ್ತಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವು ಸಂದೇಶಗಳು ಹರಿದಾಡಿದ್ದವು. ಆದರೆ ಅವೆಲ್ಲವೂ ಸುಳ್ಳು ಎಂದು ಈ ಜೋಡಿ ನಿರೂಪಿಸಿದ್ದಾರೆ.
ಭಾನುವಾರ ರಾತ್ರಿ ಮುಂಬೈನಲ್ಲಿ ನಡೆದ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶಮಿತಾ ಮತ್ತು ರಾಕೇಶ್ ಜತೆಯಾಗಿಯೇ ಆಗಮಿಸಿ, ಬ್ರೇಕ್‌ಅಪ್ ವದಂತಿಯನ್ನು ತಳ್ಳಿಹಾಕಿದ್ದಾರೆ.
ಬಿಗ್ ಬಾಸ್ ಒಟಿಟಿ ವೇದಿಕೆಯ ಮೂಲಕ ಶಮಿತಾ ಮತ್ತು ರಾಕೇಶ್ ಜೋಡಿ ಜನಪ್ರಿಯತೆ ಗಳಿಸಿದ್ದರು.