ಬುಧವಾರ, ಮೇ 25, 2022
30 °C

ಅರ್ಚನಾ ಉಡುಪ ಅವರ ‘ರಾಮನವಮಿಯ ರಾತ್ರಿ’ ಹಾಡಿನ ವಿಡಿಯೊ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಖ್ಯಾತ ಗಾಯಕಿ ಅರ್ಚನಾ ಉಡುಪ ಅವರ ಸಂಗೀತ ಸಂಯೋಜನೆ ಮತ್ತು ಗಾಯನದಲ್ಲಿ ಹೊಸ ಸಂಗೀತ ವಿಡಿಯೊ ಬಿಡುಗಡೆಯಾಗಿದೆ.

‘ರಾಮನವಮಿಯ ರಾತ್ರಿ’ ಸಂಗೀತ ವಿಡಿಯೊವನ್ನು ಲಹರಿ ಆಡಿಯೊ ಸಂಸ್ಥೆ ಹೊರತಂದಿದೆ. ಲಹರಿಯ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ. 

ಈ ಹಾಡಿಗೆ ಎಚ್‌.ಎಸ್‌.ವೆಂಕಟೇಶಮೂರ್ತಿ ಸಾಹಿತ್ಯ ಬರೆದಿದ್ದಾರೆ. ಗಿರಿಧರ ದಿವಾನ್‌ ಅವರು ನಿರ್ದೇಶನ, ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ.

ರಾಮನವಮಿಯ ಪ್ರಯುಕ್ತ ಈ ಹಾಡಿನ ವಿಡಿಯೊ ಹೊರತರುತ್ತಿರುವುದಾಗಿ ಅರ್ಚನಾ ಉಡುಪ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು