Bigg Boss Kannada 12: ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ನ 12ನೇ ಆವೃತ್ತಿಯು ಸೆ. 28ರಿಂದ ಆರಂಭವಾಗುತ್ತಿದೆ. ಈ ಕುರಿತು ಒಂದೊಂದೇ ಅಪ್ಡೇಟ್ಗಳನ್ನು ಬಿಗ್ಬಾಸ್ ತಂಡ ಬಿಡುಗಡೆ ಮಾಡುತ್ತಿದೆ. ಕಿಚ್ಚ ಸುದೀಪ್ ಇರುವ ಪ್ರೋಮೊ ನೋಡಿದ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ಸೆ. 28ರಂದು ಸಂಜೆ 6ಕ್ಕೆ ಬಿಗ್ಬಾಸ್ ಆರಂಭವಾಗಲಿದ್ದು, ಇದಾದ ನಂತರ ಪ್ರತಿ ರಾತ್ರಿ 9:30ರಿಂದ 11ರವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದರ ಮಧ್ಯೆ ಈ ವರ್ಷ ಬಿಗ್ಬಾಸ್ 12ನೇ ಆವೃತ್ತಿಗೆ ದಾರಿ ಮಾಡಿಕೊಡುವ ಸಲುವಾಗಿ ಟಾಪ್ 3 ಧಾರಾವಾಹಿಗಳು ಮುಕ್ತಾಯವಾಗುತ್ತಿವೆ.
.Bigg Boss Kannada 12:ಎಲ್ಲಾ ಗೊತ್ತು ಅನ್ನೋರಿಗೆ 'ಓ ಭ್ರಮೆ' ಅಂತಾರೆ ಬಿಗ್ ಬಾಸ್.BBK12: ಬಿಗ್ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಲು ಅದ್ಭುತ ಅವಕಾಶ.
ಧಾರಾವಾಹಿ: ದೃಷ್ಟಿಬೊಟ್ಟು

ಪ್ರಸಾರದ ಸಮಯ: ಸಂಜೆ 6:00

ಕೊನೆಯ ದಿನ: ಸೆ. 21

ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ದೃಷ್ಟಿಬೊಟ್ಟು’ ಧಾರಾವಾಹಿ ಅಂತ್ಯ ಹಾಡಿದೆ. ಈ ಬಗ್ಗೆ ನಿರ್ಮಾಪಕರಾದ ನಟ ರಕ್ಷ್ ಹಾಗೂ ಪತ್ನಿ ಅನುಷಾ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ದೃಷ್ಟಿಬೊಟ್ಟು ಸೆ. 21ರಂದು ತನ್ನ ಕೊನೆ ಸಂಚಿಕೆ ಪ್ರಸಾರ ಕಾಣಲಿದೆ.

ಧಾರಾವಾಹಿ: ರಾಮಾಚಾರಿ

ಪ್ರಸಾರದ ಸಮಯ: ರಾತ್ರಿ: 9:30

ಕೊನೆಯ ಪ್ರಸಾರ: ಇನ್ನೂ ಕೆಲವು ದಿನಗಳಲ್ಲಿ ಅಂತ್ಯ

ಅರ್ಧದಲ್ಲೇ ಕೊನೆಗೊಳ್ಳುತ್ತಿರುವ ಮತ್ತೊಂದು ಧಾರಾವಾಹಿ ‘ರಾಮಾಚಾರಿ’. ಪ್ರತಿ ದಿನ ರಾತ್ರಿ 9:30ಕ್ಕೆ ಪ್ರಸಾರವಾಗುತ್ತಿರುವ ರಾಮಾಚಾರಿ ಅಂತಿಮ ಘಟಕ್ಕೆ ತಲುಪಿದ್ದು, ಸಾವಿರದ ಸಂಚಿಕೆಯನ್ನು ದಾಟಿದ ನಂತರ ತಂಡ ವಿದಾಯ ಹೇಳಲಿದೆ. ಸದ್ಯಕ್ಕೆ 60 ಸಂಚಿಕೆಗಳು ಬಾಕಿ ಉಳಿದ್ದಿದ್ದು, ಅದು ಪ್ರಸಾರ ಕಾಣುತ್ತಿದೆ. ಬಿಗ್ಬಾಸ್ ಶುರುವಾದ ಕೆಲವು ದಿನಗಳವರೆಗೂ ರಾಮಾಚಾರಿ ಧಾರಾವಾಹಿ ಪ್ರಸಾರವಾಗಲಿದೆ. ಇದಾದ ನಂತರ ಅಂತ್ಯ ಹಾಡಲಿದೆ.

ಧಾರಾವಾಹಿ: ನಿನಗಾಗಿ

ಪ್ರಸಾರದ ಸಮಯ: ರಾತ್ರಿ: 8:00

ಇನ್ನೂ, ಮತ್ತೊಂದು ಧಾರಾವಾಹಿ ಎಂದರೆ ‘ನಿನಗಾಗಿ’. ನಟಿ ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ನಟನೆಯಲ್ಲಿ ಮೂಡಿ ಬರುತ್ತಿರುವ ನಿನಗಾಗಿ ಧಾರಾವಾಹಿ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿತ್ತು. ಆದರೆ ಇದೀಗ ನಿನಗಾಗಿ ಅಂತ್ಯ ಹಾಡೋದಕ್ಕೆ ಸಜ್ಜಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ನಿನಗಾಗಿ ಧಾರಾವಾಹಿ ಸಮ್ಪೃಥ್ವಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಸದ್ಯ ಮುಕ್ತಾಯ ಹಂತಕ್ಕೆ ಬಂದು ತಲುಪಿದೆ.

ಒಟ್ಟಿನಲ್ಲಿ ಬಿಗ್ಬಾಸ್ ಪ್ರಸಾರಕ್ಕೆ ಈ ಮೂರು ಧಾರಾವಾಹಿಗಳು ದಾರಿ ಮಾಡಿ ಕೊಡುತ್ತಿವೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಬರಲಿದ್ದು, ರಾಮಾಚಾರಿ, ದೃಷ್ಟಿಬೊಟ್ಟು ಹಾಗೂ ನಿನಗಾಗಿ ಮುಕ್ತಾಯ ಆಗಲಿವೆ.
.BBK 12 | ಬಿಗ್ಬಾಸ್ 12ಕ್ಕೂ ಕಿಚ್ಚ ಸುದೀಪ್ ಸಾರಥ್ಯ: 4 ಆವೃತ್ತಿಗಳಿಗೆ ಸಹಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.