ಬಿಗ್ಬಾಸ್ 12ನೇ ಆವೃತ್ತಿಗೆ ಎಂಟ್ರಿ ಕೊಟ್ಟಿದ್ದ ಗಿಲ್ಲಿ ನಟನ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಆಗಾಗ್ಗೆ ಬಿಗ್ಬಾಸ್ ಮನೆಯಲ್ಲಿ ಚಿಕ್ಕಪ್ಪನ ಕಥೆ ಹೇಳುತ್ತಿದ್ದ ಗಿಲ್ಲಿ ನಟ ನಿಜ ಜೀವನದಲ್ಲಿ ನಿಜಕ್ಕೂ ಚಿಕ್ಕಪ್ಪ ಆಗಿದ್ದಾರೆ. ಈ ಖುಷಿಯ ವಿಚಾರವನ್ನು ಗಿಲ್ಲಿ ನಟ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗಿಲ್ಲಿ ನಟನ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೊ ಜೊತೆಗೆ ‘ಗಿಲ್ಲಿಗೆ ಗೊತ್ತಿರದ ವಿಷಯ ಒಂದಿದೆ. ಬಿಗ್ಬಾಸ್ ಮನೆಯ ಒಳಗೆ ಕೂತು ಚಿಕ್ಕಪ್ಪನ ಕಥೆ ಹೇಳೋ ಗಿಲ್ಲಿ ನಿಜಕ್ಕೂ ಚಿಕ್ಕಪ್ಪ ಆಗಿದ್ದಾರೆ. ಗಿಲ್ಲಿಯ ಪ್ರೀತಿಯ ಅಣ್ಣ ಹಾಗೂ ಅತ್ತಿಗೆಗೆ ಇಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ ಒಂದು ಕಡೆಯಾದರೆ, ಮುದ್ದು ಕೃಷ್ಣ ಹುಟ್ಟಿರೋ ಖುಷಿ ಇನ್ನೊಂದು ಕಡೆ’ ಎಂದು ಬರೆದುಕೊಳ್ಳಲಾಗಿದೆ.

ಇನ್ನು, ಇದೇ ಪೋಸ್ಟ್ ನೋಡಿದ ಅಭಿಮಾನಿಗಳು ಗಿಲ್ಲಿ ನಟ ಅವರ ಅಣ್ಣ ಹಾಗೂ ಅತ್ತಿಗೆಗೆ ಶುಭ ಹಾರೈಸುತ್ತಿದ್ದಾರೆ. ಅಲ್ಲದೇ ನಮ್ಮ ಬೆಂಬಲ ಗಿಲ್ಲಿ ನಟನಿಗೆ ಎಂದು ಕಾಮೆಂಟ್ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.