‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದ ಸುಷ್ಮಾ ರಾಜ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕನ್ನಡದ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ, ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದಿರುವ ನಟಿ ಸುಷ್ಮಾ ರಾಜ್ ಕಾಡಬೆಟ್ಟು ವಿಭಿನ್ನ ಲುಕ್ನಲ್ಲಿ ಬೇಬಿ ಬಂಪ್ ಪೋಟೊಶೂಟ್ ಮಾಡಿಸಿದ್ದಾರೆ.

ನಟಿ ಸುಷ್ಮಾ ರಾಜ್ ಮೇ 2024ರಲ್ಲಿ ನಿಶಾನ್ ನರೇಂದ್ರ ಎಂಬುವವರ ಜೊತೆಗೆ ಮದುವೆಯಾಗಿದ್ದರು. ಈ ಇಬ್ಬರು 10 ವರ್ಷಗಳಿಂದ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇಲೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ಸುಷ್ಮಾ ರಾಜ್ ಪತಿ ಜಿಮ್ ಟ್ರೈನರ್ ಆಗಿದ್ದಾರೆ. ಅಲ್ಲದೇ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸುಷ್ಮಾ ಅವರು ದುನಿಯಾ ವಿಜಯ್ ಅವರ ‘ಮಾಸ್ತಿಗುಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ‘ಹುಬ್ಬಳ್ಳಿ ಹುಡುಗ ಮಂಗಳೂರು ಹುಡ್ಗಿ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಹುಲಿ ಕುಣಿತದಲ್ಲಿಯೇ ಪಳಗಿರುವ ಸುಷ್ಮಾ ಅವರು ಸಾಕಷ್ಟು ಕಡೆ ಹುಲಿ ಕುಣಿತ ಪ್ರದರ್ಶನ ನೀಡಿದ್ದಾರೆ.

ಅಷ್ಟೇ ಅಲ್ಲದೇ ಈಟಿವಿ ವಾಹಿನಿಯ ‘ಇಂಡಿಯನ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಟಾಪ್ 4 ಸ್ಥಾನ ಪಡೆದುಕೊಂಡಿದ್ದರು. ಮಾಡೆಲ್ ಆಗಿಯೂ ಅವರು ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಿಟ್ನೆಸ್ ಟ್ರೇನಿಂಗ್ ಕೂಡ ನೀಡುತ್ತಾರೆ. ಅಲ್ಲದೆ ರಿಯಾಲಿಟಿ ಶೋ ನಿರೂಪಣೆ ಕೂಡ ಮಾಡಿದ್ದರು.

ಸದ್ಯ ಸುಷ್ಮಾ ರಾಜ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿಭಿನ್ನ ಲುಕ್ನಲ್ಲಿ ಬೇಬಿ ಬಂಪ್ ಲುಕ್ನಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಸುಷ್ಮಾ ಅವರ ಹೊಟ್ಟೆಯ ಮೇಲೆ ಮರಿ ಹುಲಿ ಮಲಗಿದ ಪರಿಕಲ್ಪನೆಯಲ್ಲಿ ಫೋಟೊಶೂಟ್ ಮಾಡಿದ್ದಾರೆ. ಇದೇ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸುಷ್ಮಾ ಹಂಚಿಕೊಂಡಿದ್ದಾರೆ.

ವಿಶೇಷ ಎಂದರೆ ಸುಷ್ಮಾ ರಾಜ್ ಅವರ ತಂದೆ ಫೆಬ್ರವರಿಯಲ್ಲಿ ನಿಧನರಾಗಿದ್ದರು. ಸುಷ್ಮಾ ರಾಜ್ ಅವರ ಚೊಚ್ಚಲ ಮಗು ಕೂಡ ಫೆಬ್ರವರಿಯಲ್ಲೇ ಜನಿಸಲಿದ್ದು, ಈ ಬಗ್ಗೆ ಕೂಡ ದಂಪತಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು, ಸುಷ್ಮಾ ರಾಜ್ ತಮ್ಮ ಹೊಟ್ಟೆಯ ಮೇಲೆ ಮರಿ ಹುಲಿ ಚಿತ್ರವನ್ನು ಹಾಕಿಕೊಳ್ಳುವುದಕ್ಕು ಒಂದು ಕಾರಣವಿದೆ. ಸುಷ್ಮಾ ರಾಜ್ ಅವರು ಕರಾವಳಿಯ ಹೆಣ್ಣು ಹುಲಿ ಎಂದೇ ಹೆಸರು ಮಾಡಿದ್ದಾರೆ. ಇವರು ಉಡುಪಿಯ ಅಶೋಕ್ ರಾಜ್-ರಾಧಾ ದಂಪತಿಯ ಪುತ್ರಿ. ಸುಷ್ಮಾ ರಾಜ್ ಅವರ ತಂದೆ ಸುಮಾರು 35 ವರ್ಷಗಳಿಂದ ಹುಲಿಕುಣಿತ ತರಬೇತಿ ನೀಡುತ್ತಿದ್ದರು. ತಂದೆಯಂತೆ ಮಗಳು ಸುಷ್ಮಾ ರಾಜ್ ಕೂಡ ಹುಲಿ ಕುಣಿತದಲ್ಲಿಯೇ ಪಳಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.