ಗುರುವಾರ , ಮಾರ್ಚ್ 23, 2023
21 °C

ಹಕ್ಕಿ ಹಾರುತಿದೆ ನೋಡಿದಿರಾ?: ಕ್ಯಾಮರಾದಲ್ಲಿ ಸೆರೆಯಾದ ಪಾರಿವಾಳಗಳ ಲವಲವಿಕೆ

ಗಿರಿಧರ್ ಖಾಸನೀಸ್ Updated:

ಅಕ್ಷರ ಗಾತ್ರ : | |

ಕೊರೊನಾ ಮಹಾಮಾರಿಯ ದೆಸೆಯಿಂದ ಇಪ್ಪತ್ನಾಲ್ಕು ಗಂಟೆ ಮನೆಯಲ್ಲೇ ಉಳಿಯುವುದು ಅನಿವಾರ್ಯವಾಗಿ ಮುದುಡಿದ ಮನಸ್ಸಿಗೊಂದಿಷ್ಟು ಸಮಾಧಾನ ತರಲು ಅಪಾರ್ಟ್‌ಮೆಂಟ್‌ನ ತಾರಸಿಯ ಮೇಲೆ ದಿನಕ್ಕೆ ಮೂರ್ನಾಲ್ಕು ಬಾರಿ ಹೋಗಿ ಬರುವ ಅಭ್ಯಾಸ ತನ್ನಿಂದ ತಾನಾಗಿಯೇ ಶುರುವಾಗಿತ್ತು.

ತಾರಸಿಯ ನೆಲದ ಮೇಲೆ ಓಡಾಡುವುದು, ಮೈ ಕೈ ಆಡಿಸುವುದು, ಓದುವುದು ... ಇವುಗಳ ಜೊತೆ ಚಲಿಸುವ ಮೋಡಗಳ, ಚಿಲಿಪಿಲಿ ಹಕ್ಕಿಗಳ, ಗೋಡೆ, ಪ್ಯಾರಪೆಟ್, ಮೆಟ್ಟಿಲ ಮೇಲಿನ ನೆರಳು ಬೆಳಕಿನಾಟವನ್ನು ನೋಡುವುದು ಸಾಮಾನ್ಯವಾಗಿ ಹೋಯಿತು.


ಆಡಲು ಹಾಡಲು ತಾ ಹಾರಾಡಲು...

ಆಗಲೇ ಈ ಪಾರಿವಾಳಗಳ ಪರಿಚಯವಾಗಿದ್ದು. ಅವುಗಳ ಬಿರುಗಣ್ಣ ನೋಟ, ಹಾರಿಳಿಯುವ ವೈಖರಿ, ಹತ್ತು ಹಲವು ಹಾವಭಾವಗಳು, ಚಲನವಲನಗಳು, ಸಣ್ಣ ಕದನಗಳು, ಕೀಟಲೆ, ಕುಚೇಷ್ಟೆಗಳು - ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಸಾಮಾನ್ಯ ಹಕ್ಕಿಗಳಲ್ಲಡಗಿದ ಅಸಾಧಾರಣ ಬೆಡಗು, ಲವಲವಿಕೆ ಹಾಗೂ ನಾಟಕೀಯತೆ ಚಕಿತಗೊಳಿಸಿತು.


ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ...

ನನ್ನ ಉತ್ಸಾಹವನ್ನು ಕ್ಯಾಮೆರಾ ಕಣ್ಣಿಗೆ ವರ್ಗಾಯಿಸುವುದು ಸವಾಲಾದರೂ, ಬರಬರುತ್ತಾ ಅದು ದೈನಂದಿನ ದಿನಚರಿಯ ಅಂಗವಾಗಿ ಹೋಯಿತು. ಹಾಗೆ ಸೆರೆಹಿಡಿದ ಅನೇಕ ಚಿತ್ರಗಳಲ್ಲಿ ಕೆಲವನ್ನು ಆರಿಸಿ ಹಂಚಿಕೊಳ್ಳಬೇಕ್ಕೆನ್ನುವಾಗ ದ.ರಾ. ಬೇಂದ್ರೆಯವರ ಚಿರಪರಿಚಿತ ಹಾಡು ‘ಹಕ್ಕಿ ಹಾರುತಿದೆ ನೋಡಿದಿರಾ...’ ತಾನಾಗಿ ತುಟಿಯ ಮೇಲೆ ನಲಿದು ಬಂದಿತು.


ಪಿಸುಮಾತು


ಹಾರಿಳಿಯುವ ವೈಖರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು